ಬುಧವಾರ, ಜನವರಿ 20, 2021
28 °C

ಈರುಳ್ಳಿ ವ್ಯಾಪಾರಕ್ಕೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾರಾಷ್ಟ್ರದ ನಾಸಿಕ್ ಬಳಿಯ ರೈತ ಉತ್ಪಾದಕ ಸಂಸ್ಥೆ ಗಿರ್ನರ್‌ಖೋರ್‌ ಹಾಗೂ ಬೆಂಗಳೂರಿನ ಟಸ್ಕರ್ ಬೆರಿ ಅಗ್ರಿ ವೆಂಚರ್ಸ್‌ ನಡುವೆ ₹350 ಕೋಟಿ ಈರುಳ್ಳಿ ವ್ಯಾಪಾರದ ಒಪ್ಪಂದ ನಡೆದಿದೆ.

‘ರೈತರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ತನ್ನ ದೇಶೀಯ ಕಾರ್ಯಾಚರಣೆಗಾಗಿ ಈರುಳ್ಳಿಯನ್ನು ಕೇಂದ್ರೀಕರಿಸಿದೆ. ಈ ಒಪ್ಪಂದದಿಂದ ಮೊದಲ ವರ್ಷದಲ್ಲಿ ₹350 ಕೋಟಿ ಈರುಳ್ಳಿ ವಹಿವಾಟಿಗೆ ಒಪ್ಪಂದ ನಡೆದಿದೆ. 2025ರ ವೇಳೆಗೆ ₹5 ಸಾವಿರ ಕೋಟಿ ವಹಿವಾಟು ಗುರಿ ಇದೆ’ ಎಂದು ಟಸ್ಕರ್ ಬೆರಿ ನಿರ್ದೇಶಕ ಮಹಾಂತೇಶ್ ಎಂ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಸುಜಯ್ ಬೇಲೂರು,‘ಸಂಸ್ಥೆ ಈಗ ಉತ್ತರ ಕರ್ನಾಟಕ ಹಾಗೂ ನಾಸಿಕ್ ಈರುಳ್ಳಿ ಬೆಳೆಗಳ ಮೇಲೆ ಕೇಂದ್ರೀಕರಿಸಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಮ್ಮು–ಕಾಶ್ಮೀರದಲ್ಲಿ ಕಾರ್ಯಾಚರಣೆ ಆರಂಭಿಸಲು ಯೋಜನೆ ರೂಪಿಸಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು