ಬೆಂಗಳೂರು: ಖಾಸಗಿ ಕಂಪನಿ ಉದ್ಯೋಗಿಗೆ ಸಲಿಂಗ ಕಾಮದ ಆಮಿಷವೊಡ್ಡಿ ಶೆಡ್ಗೆ ಕರೆಸಿಕೊಂಡು ಹಲ್ಲೆ ನಡೆಸಿ ಹಣ ಹಾಗೂ ಮೊಬೈಲ್ ದೋಚಿದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸೂಫಿ ಮತ್ತು ಆತನ ಸಹಚರ ಮತೀನ್ ಬಂಧಿತರು. ಆರೋಪಿಗಳು ಖಾಸಗಿ ಕಂಪನಿಯ 31 ವರ್ಷದ ಉದ್ಯೋಗಿಯ ಹಣ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಸಂತ್ರಸ್ತ ವ್ಯಕ್ತಿಯು ಡೇಟಿಂಗ್ ಆ್ಯಪ್ನ ಚಂದಾದಾರರಾಗಿದ್ದರು. ಈ ಆ್ಯಪ್ ಮೂಲಕ ಅವರನ್ನು ಸಂಪರ್ಕಿಸಿದ್ದ ಸೂಫಿ, ಸಲಿಂಗ ಕಾಮದ ಆಮಿಷವೊಡ್ಡಿದ್ದ. ಅಲ್ಲದೆ, ಅವರ ಮೊಬೈಲ್ ಸಂಖ್ಯೆಯನ್ನು ಪಡೆದು ಹಲವು ಬಾರಿ ವಿಡಿಯೊ ಕರೆ ಮಾಡಿ ಮಾತನಾಡಿದ್ದ. ಜುಲೈ 5ರಂದು ವೈಯಾಲಿಕಾವಲ್ನ ನಿರ್ಜನ ಪ್ರದೇಶದ ಶೆಡ್ಗೆ ಕರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದ್ದಾರೆ.

‘ಸಂತ್ರಸ್ತ ಶೆಡ್ಗೆ ಬಂದು ಸೂಫಿಯನ್ನು ಭೇಟಿಯಾಗಿದ್ದರು. ಅದೇ ವೇಳೆಗೆ ಶೆಡ್ನ ಮಾಲೀಕನ ಸೋಗಿನಲ್ಲಿ ಅಲ್ಲಿಗೆ ಬಂದಿದ್ದ ಮತೀನ್, `ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೀರಾ’ ಎಂದು ಬೆದರಿಸಿದ್ದ. ನಂತರ ಆರೋಪಿಗಳು ಒಟ್ಟಾಗಿ ಸಂತ್ರಸ್ತನ ಮೊಬೈಲ್ ಕಿತ್ತುಕೊಂಡಿದ್ದರು. ಆತ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಲ್ಲೆ ನಡೆಸಿ, ಗೂಗಲ್ ಪೇ ಮೂಲಕ ₹3 ಸಾವಿರ ಪಡೆದು ಶೆಡ್ನಿಂದ ಬಿಟ್ಟು ಕಳುಹಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ಮರ್ಯಾದೆಗೆ ಅಂಜಿ ದೂರು ಕೊಟ್ಟಿರಲಿಲ್ಲ. ಬಳಿಕ ಜುಲೈ 9ರಂದು ಠಾಣೆಗೆ ದೂರು ಕೊಟ್ಟರು. ಈ ದೂರು ಆಧರಿಸಿ ಸೂಫಿ ಮತ್ತು ಮತೀನ್ನನ್ನು ಬಂಧಿಸಲಾಗಿದೆ. ಅಪರಾಧ ಹಿನ್ನೆಲೆಯುಳ್ಳ ಸೂಫಿ ವಿರುದ್ಧ ಕೊಲೆ ಯತ್ನ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.