ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಮೂರ್ತಿ ವಿಸರ್ಜನೆ ವೇಳೆ ಇಬ್ಬರು ನೀರುಪಾಲು

Last Updated 5 ಅಕ್ಟೋಬರ್ 2022, 16:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರದ ನಿವಾಸಿ ರಾಮ್‌ ರತನ್‌ ಅವರ ಮನೆಯಲ್ಲಿ ದಸರಾ ಅಂಗವಾಗಿ ಪೂಜಿಸಿದ್ದ ದುರ್ಗಾಮಾತೆ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸುವ ವೇಳೆ ಇಬ್ಬರು ನೀರು ಪಾಲಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ನಡೆಸಿದರೂ ಇಬ್ಬರ ಸುಳಿವು ಸಿಕ್ಕಿಲ್ಲ.

‘ರತನ್‌ ಅವರು ಮಹಾರಾಷ್ಟ್ರದ ನಿವಾಸಿ. ನಗರದಲ್ಲಿ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದರು. ನವರಾತ್ರಿ ಅಂಗವಾಗಿ ಮನೆಯಲ್ಲಿ ದುರ್ಗಾ ಮಾತೆ ಪೂಜಿಸಿದ್ದರು. ಬುಧವಾರ ಕುಟುಂಬದ ಐವರೊಂದಿಗೆ ಮೂರ್ತಿ ವಿಸರ್ಜನೆಗೆ ಕೆಂಗೇರಿಯ ಉತ್ತರಹಳ್ಳಿ ಮುಖ್ಯರಸ್ತೆಯ ಸಾವನ್ ದರ್ಬಾರ್ ಆಶ್ರಮದ ಮುಂಭಾಗದ ಸುಣಕಲ್ ಪಾಳ್ಯಕೆರೆಗೆ ತೆರಳಿದ್ದರು. ಆಗ ಸೋಮೇಶ್‌ (21) ಹಾಗೂ ಜಿತು (22) ಅವರು ನಾಪತ್ತೆ ಆಗಿದ್ದಾರೆ. ಉಳಿದ ಮೂವರು ಮಾತ್ರ ನೀರಿನಿಂದ ಹೊರಬಂದಿದ್ಧಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT