ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ: ಎರಡು ತಿಂಗಳಲ್ಲಿ ₹2 ಸಾವಿರ ಕೋಟಿ ಸಂಗ್ರಹ

ಬಿಬಿಎಂಪಿ ಇತಿಹಾಸದಲ್ಲಿ ಹೊಸ ದಾಖಲೆ: 28 ದಿನಗಳಲ್ಲಿ ₹1 ಸಾವಿರ ಕೋಟಿ ಸಂಗ್ರಹ
Last Updated 3 ಜೂನ್ 2022, 20:02 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿ ದಾಖಲೆ ಬರೆದಿದ್ದು, 28 ದಿನಗಳಲ್ಲಿ ₹1 ಸಾವಿರ ಕೋಟಿ ಮತ್ತು ಕಳೆದ ಎರಡು ತಿಂಗಳಲ್ಲಿ ₹2 ಸಾವಿರ ಕೋಟಿ ತೆರಿಗೆ ಸಂಗ್ರಹಿಸಿದೆ.

ತೆರಿಗೆ ಸಂಗ್ರಹ ವಿಚಾರದಲ್ಲಿ ತೆಗೆದುಕೊಂಡ ಸಣ್ಣ–ಸಣ್ಣ ಸುಧಾರಣಾ ಕ್ರಮಗಳಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ) ಆರ್.ಎಲ್‌. ದೀಪಕ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ತೆರಿಗೆ ಪಾವತಿಸಲು ವಲಯ ಆಯ್ಕೆ ಮಾಡುವ ಪದ್ಧತಿಯನ್ನು ಸರಳಗೊಳಿಸಲಾಗಿದೆ. ಖಾಲಿ ನಿವೇಶನ ಎಂದು ಬಿಬಿಎಂಪಿಗೆ ಮಾಹಿತಿ ನೀಡಿ ತೆರಿಗೆ ವಂಚಿಸುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಸಂಪರ್ಕ ಪಡೆದಿರುವ ಬಗ್ಗೆ ಬೆಸ್ಕಾಂನಿಂದ ಮಾಹಿತಿ ಪಡೆದು ಎರಡೂ ದಾಖಲೆಗಳನ್ನು ತಾಳೆ ಮಾಡಿ ಪರಿಶೀಲಿಸಲಾಗುತ್ತಿದೆ. ಕಟ್ಟಡ ವಾಣಿಜ್ಯ ಬಳಕೆಯೋ, ಗೃಹ ಬಳಕೆಯೋ ಎಂಬುದು ಗೊತ್ತಾಗುತ್ತಿದೆ. ತೆರಿಗೆ ವಸೂಲಿ ಸುಲಭವಾಗುತ್ತಿದೆ’ ಎಂದರು.

‘ಡ್ರೋನ್ ಬಳಸಿಯೂ ಖಾಲಿ ನಿವೇಶನವಿದೆಯೋ, ಕಟ್ಟಡ ನಿರ್ಮಾಣ ಆಗಿದೆಯೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಯಲಹಂಕ ವಲಯದಲ್ಲಿ ಪ್ರಯೋಗಿಕವಾಗಿ ಡ್ರೋನ್ ಬಳಸಿ ಸರ್ವೆ ಮಾಡಲಾಗಿದೆ. ಅದರ ಬಳಿಕವೂ ಅಧಿಕಾರಿಗಳು ಕಟ್ಟಡಗಳನ್ನು ಖುದ್ದು ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT