ಮಂಗಳವಾರ, ಆಗಸ್ಟ್ 16, 2022
21 °C

‘ಸಿರಿ ಕನ್ನಡ ವಾಹಿನಿ’ಗೆ 2ನೇ ವರ್ಷದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡದ ಮನೋರಂಜನಾ ವಾಹಿನಿಯಾಗಿರುವ ‘ಸಿರಿ ಕನ್ನಡ’ವು ಯಶಸ್ವಿಯಾಗಿ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. 

‘ಕೋವಿಡ್ ಸಂದರ್ಭದಲ್ಲಿಯೂ ನೂತನ ಧಾರಾವಾಹಿಗಳು, ವಿಭಿನ್ನ ಆಟದ ಪ್ರದರ್ಶನಗಳು, ಹಬ್ಬದ ವಿಶೇಷ ಕಾರ್ಯಕ್ರಮಗಳು, ಭಕ್ತಿ ಪ್ರಧಾನ ಶೋಗಳನ್ನು ನೀಡಿದ್ದೇವೆ. ಮನೆ ಮನಗಳಿಗೆ ತಲುಪಿರುವ ವಾಹಿನಿಯು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಇದೆ. ವೀಕ್ಷಕರು ಇಷ್ಟಪಟ್ಟಿರುವ ಧಾರಾವಾಹಿಗಳ ಜತೆಗೆ ಹೊಸ ಕಾರ್ಯಕ್ರಮಗಳು ರಂಜಿಸಲಿವೆ. ಅಪಾರ ಜನಪ್ರಿಯತೆ ಪಡೆದಿರುವ ‘ಕ್ಯಾಶ್ ಬಾಕ್ಸ್‌’ನಲ್ಲಿ ವಿಜೇತರಿಗೆ ₹ 25 ಸಾವಿರ ಬಹುಮಾನ ನೀಡಲಾಗುತ್ತಿದೆ. ‘ನಾರಿಗೊಂದು ಸೀರೆ’ ಕಾರ್ಯಕ್ರಮವು 120ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದ್ದು, 500ಕ್ಕೂ ಹೆಚ್ಚು ಸೀರೆಗಳನ್ನು ಮಹಿಳಾ ಮಣಿಗಳ ಬಳಿ ತರುತ್ತಿದೆ’ ಎಂದು ವಾಹಿನಿಯ ಮುಖ್ಯಸ್ಥರಾದ ಸಂಜಯ್ ಶಿಂದೆ ತಿಳಿಸಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.