ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಜಿ ವಿದ್ಯಾರ್ಥಿನಿ ಫೇಲ್‌: ಟೀಚ್‌ಮೆಂಟ್‌’ ಬಳಸದಂತೆ ಸೂಚನೆ

Last Updated 10 ಫೆಬ್ರುವರಿ 2023, 21:42 IST
ಅಕ್ಷರ ಗಾತ್ರ

ಆನೇಕಲ್: ಯುಕೆಜಿ ವಿದ್ಯಾರ್ಥಿನಿಯ ನ್ನು ಅನುತ್ತೀರ್ಣಗೊಳಿಸಿದ ತಾಲ್ಲೂಕಿನ ಚಂದಾಪುರ ಸಮೀಪದ ದೀಪಹಳ್ಳಿಯ ಸಂತ ಜೋಸೆಫ್‌ ಚಾಮಿನೆಟ್‌ ಅಕಾಡೆಮಿಯ ಶಾಲೆಗೆ ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದರು.

‘ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಟೀಚ್‌ಮೆಂಟ್‌ ಆ್ಯಪ್‌ ಬಳಸಬಾರದು. ಈ ಹಂತದಲ್ಲಿ ಮಕ್ಕಳು ಸಂತಸದಿಂದ ಕಲಿಯುವಂತಹ ಚಟುವಟಿಕೆ ರೂಪಿಸ ಬೇಕು. ಪುಟಾಣಿಗಳಲ್ಲಿನ ಸೃಜನಶೀಲತೆ ಮತ್ತು ಉತ್ಸಾಹಕ್ಕೆ ಪ್ರೋತ್ಸಾಹಿಸಬೇಕು’ ಎಂದು ಶಾಲಾ ಆಡಳಿತ ಮಂಡಳಿಗೆ ಸೂಚಿಸಿದರು.

ಘಟನೆ ಸಂಬಂಧ ಮುಖ್ಯಶಿಕ್ಷಕರಿಗೆ ನೀಡಿದ್ದ ನೋಟಿಸ್‌ಗೆ ಸಂಬಂಧಿಸಿದಂತೆ ವಿವರ ಪಡೆಯಲಾಗಿದೆ. ಆ್ಯಪ್‌ನಲ್ಲಿ ವಿದ್ಯಾರ್ಥಿನಿಯ ಅಂಕಪಟ್ಟಿ ಯನ್ನು ಡಿಲೀಟ್‌ ಮಾಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇಲಾಖೆಯ ಸೂಚನೆ ಪಾಲನೆ: ಘಟನೆ ಸಂಬಂಧ ಶಾಲೆಯ ಪ್ರಾಂಶುಪಾಲ ಸಾಜು ಚಿಟ್ಟದಿಯಿಲ್‌ ಪ್ರತಿಕ್ರಿಯಿಸಿ, ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸೂಚನೆಗಳನ್ನು ಪಾಲಿಸಲಾಗುವುದು. ವಿದ್ಯಾರ್ಥಿನಿಯ ವೈಯಕ್ತಿಕ ಅಂಕಪಟ್ಟಿಯಲ್ಲಿ ಅನುತ್ತೀರ್ಣ ಎಂದು ದಾಖಲಿಸಿಲ್ಲ’ ಎಂದರು.

‘ಡಿಫಾಲ್ಟ್‌ ಸಾಫ್ಟ್‌ವೇರ್‌ನಿಂದ ಈ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಪೋಷಕರಿಗೂ ಮಾಹಿತಿ ನೀಡಲಾಗಿದೆ. ಇಂತಹ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ತಿಳಿಸಿದರು.

ಈ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಅಳೆಯಲು ‘ಟೀಚ್‌ಮೆಂಟ್‌’ ಎಂಬ ಮೊಬೈಲ್‌ ಆ್ಯಪ್‌ ಬಳಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಶೇ 35ಕ್ಕಿಂತ ಕಡಿಮೆ ಅಂಕಗಳನ್ನು ಪಡೆದರೆ ಫಲಿತಾಂಶವನ್ನು ‘ಫೇಲ್‌’ ಎಂದು ತೋರಿಸುವ ಡಿಫಾಲ್ಟ್‌ ಫೀಚರ್ ಈ ಆ್ಯಪ್‌ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT