ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈದೇಹಿ ಸಾಹಿತ್ಯ ಚಿಂತನ–ಮಂಥನ ನಾಳೆ

Published 31 ಮೇ 2024, 18:35 IST
Last Updated 31 ಮೇ 2024, 18:35 IST
ಅಕ್ಷರ ಗಾತ್ರ

ಬೆಂಗಳೂರು: ವೈದೇಹಿಯವರು ಕನ್ನಡ ಸಾಹಿತ್ಯಲೋಕದ ಹಿರಿಯ, ಅತ್ಯಂತ ಸೂಕ್ಷ್ಮ ಬರಹಗಾರರು. ಸವಿದವರೇ ಬಲ್ಲರು ಬೆಲ್ಲದ ಸಿಹಿಯ ಎನ್ನುವಂತೆ ವೈದೇಹಿ ಅವರ ಕತೆಗಳನ್ನ, ಕವನ, ನಾಟಕ, ಕಾದಂಬರಿ ಮತ್ತು ಲೇಖನಗಳನ್ನು ಓದಿದವರಿಗೇ ಗೊತ್ತು ಅವರ ಬರಹಗಳಲ್ಲಿನ ವೈಚಾರಿಕ ಆಳ, ಭಾಷಾ ಸೊಗಡು, ಭಾವನಾ ಲೋಕ ತರ್ಕ ಎಲ್ಲವೂ.

ವೈದೇಹಿ ಅಭಿಮಾನಿಗಳ ಬಳಗವು ಜೂನ್‌ 2ರಂದು ಭಾನುವಾರ ಬೆಳಿಗ್ಗೆ 10ಕ್ಕೆ ವೈದೇಹಿ ಸಾಹಿತ್ಯ– ಮೂರು ಪುಸ್ತಕಗಳ ಚಿಂತನ ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ನಡೆಸಿಕೊಡಲಿದ್ದಾರೆ. ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ,ಎಸ್.ಆರ್. ವಿಜಯಶಂಕರ ಕೃತಿಗಳ ಅವಲೋಕನ ಮಾಡಲಿದ್ದಾರೆ.

ಸೀಮಾಂತೆ ಅಲ್ಲ ಸೀಮಾತೀತೆ; ವೈದೇಹಿ ಸಾಹಿತ್ಯ ಲೋಕ ದರ್ಶನದ ಕುರಿತು ಲೇಖಕಿ ಡಾ. ಬಿ.ಎನ್. ಸುಮಿತ್ರಾ ಬಾಯಿ
(ಪ್ರ: ವಿಕಾಸ ಪ್ರಕಾಶನ), ನೆನಪು ಏಕತಾರಿ; ವಿವಿಧ ವ್ಯಕ್ತಿಚಿತ್ರಗಳ ರಾಗಮಾಲೆ; ಲೇಖಕಿ : ವೈದೇಹಿ.
(ಪ್ರ : ಅಭಿನವ ಪ್ರಕಾಶನ), ಹೆಗಲಲಿದೆ ಸಾವಿರ ಸವಾಲು; ವೈದೇಹಿ ಅವರ ಆಯ್ದ ಸ್ತ್ರೀ ಕೇಂದ್ರಿತ ನಿರೂಪಣೆಗಳು–  ಸಂಪಾದಕಿ :
ಡಾ. ಎಂ. ಎಸ್. ಆಶಾದೇವಿ
( ಪ್ರ: ವಸಂತ ಪ್ರಕಾಶನ)

ವೈದೇಹಿಯವರ ಕವನಗಳ ವಾಚನ:
ಎನ್ ಮಂಗಳ ಮತ್ತು ಚೈತ್ರಾ ಶಿವಯೋಗಿಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT