ಬೆಂಗಳೂರು: ವರ್ತೂರು ಕೆರೆಯನ್ನು ಬಿಡಿಎಯಿಂದ ಪೂರ್ವ ನಗರ ಪಾಲಿಕೆಗೆ ಹಸ್ತಾಂತರಿಸಿಕೊಳ್ಳಬೇಕು ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಕಾಮಗಾರಿಗಳನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

ಕೆರೆಗಳಿಗೆ ಒಳಬರುವ ಮಲಿನ ನೀರಿನ ನಿಯಂತ್ರಣ ಮತ್ತು ತಡೆ ಕ್ರಮಕ್ಕಾಗಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ನಗರ ಪಾಲಿಕೆ ಎಂಜಿನಿಯರ್, ಬಿಡಿಎ ಎಂಜಿನಿಯರ್, ಜಲಮಂಡಳಿ ಎಂಜಿನಿಯರ್ ಹಾಗೂ ಘನ ತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿದರು.

ಬೆಳ್ಳಂದೂರು ಕೆರೆಯನ್ನು ಬಿಡಿಎ ನಿರ್ವಹಣೆ ಮಾಡುತ್ತಿದೆ. ಕೆರೆಯಲ್ಲಿನ ಹೂಳು ಎತ್ತುವ ಕಾರ್ಯವನ್ನು ಮಳೆಗಾಲಕ್ಕೂ ಮೊದಲೇ ಪೂರ್ಣಗೊಳಿಸಬೇಕು. ಕೆರೆಯ ಗಡಿಗೋಡೆ, ಕಾಂಪೌಂಡ್ಗಳನ್ನು ಪರಿಶೀಲನೆ ನಡೆಸಿ ಕೆರೆ ಒತ್ತುವರಿ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡು, ಒತ್ತುವರಿ ತೆರವಿಗೆ ಕ್ರಮವಹಿಸುವಂತೆ ಸೂಚಿಸಿದರು.

ಕೆರೆಯ ಒಳ ಹಾಗೂ ಹೊರ ಹರಿವುಗಳನ್ನು ನಿರ್ವಹಣೆ ಮಾಡಿ, ಪುನಶ್ಚೇತನ ಅಭಿವೃದ್ಧಿ ಕಾಮಗಾರಿಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಹೇಳಿದರು.

ವರ್ತೂರು ಕೆರೆ ಪುನಶ್ಚೇತನ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ಬಿಡಿಎ ಎಂಜಿನಿಯರ್ಗಳು ಮಾಹಿತಿ ನೀಡಿದರು. ಒಳಚರಂಡಿ ಸಂಸ್ಕರಣಾ ಘಟಕದಿಂದ ಶುದ್ಧೀಕರಿಸಿದ ನೀರನ್ನು ಕೆರೆಗೆ ಹರಿಸಲಾಗುತ್ತಿದೆ ಎಂದು ಜಲಮಂಡಳಿ ಎಂಜಿನಿಯರ್ಗಳು ಹೇಳಿದರು.

ಕೆರೆ ಏರಿ, ಒಳಹರಿವು, ಗಡಿ ಬೇಲಿ ಹಾಗೂ ತೂಬು ಪರಿಶೀಲನೆ ಗೇಟ್ ಪರಿಶೀಲನೆ ನಡೆಸಿ, ಉತ್ತಮ ನಿರ್ವಹಣೆಗೆ ಆಯುಕ್ತರು ಸೂಚಿಸಿದರು.

ಬಿಡಿಎಯೊಂದಿಗೆ ಸಮನ್ವಯ ಸಾಧಿಸಿ, ಕೆರೆಯ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಪೂರ್ವ ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭೂಸ್ವಾಧೀನ: ಹೊರವರ್ತುಲ ರಸ್ತೆಯಿಂದ ಸೀತಾರಾಂಪಾಳ್ಯದ ಮೂಲಕ ಸತ್ಯಸಾಯಿ ಆಸ್ಪತ್ರೆವರೆಗೆ ಪರಿಷ್ಕೃತ ಮಹಾಯೋಜನೆ-2015ಯಂತೆ 24 ಮೀಟರ್ ಅಗಲದ ರಸ್ತೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಇದರ ಮೊದಲ ಹಂತದಲ್ಲಿ ಹೊರ ವರ್ತುಲ ರಸ್ತಯಿಂದ ಸೀತಾರಾಂಪಾಳ್ಯ ಕೆರೆವರೆಗೆ ಸುಮಾರು 2.2 ಕಿ.ಮೀ. ಉದ್ದರ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಅಧಿಸೂಚನೆ ಹೊರಡಿಸಲು ಪೂರ್ವ ನಗರ ಪಾಲಿಕೆಯ ಅಭಿವೃದ್ಧಿಯ ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಉದ್ಯಾನ ಒತ್ತುವರಿ ತೆರವು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಗುಬ್ಬಲಾಳದ ಉದ್ಯಾನದಲ್ಲಿ ಒತ್ತುವರಿಯನ್ನು ಮಂಗಳವಾರ ತೆರವು ಮಾಡಿ ವಶಕ್ಕೆ ಪಡೆದುಕೊಂಡರು. ಉತ್ತರಹಳ್ಳಿ ಉಪ ವಿಭಾಗದ ಗುಬ್ಬಲಾಳ ಗ್ರಾಮದ ಸರ್ವೆ ನಂಬರ್ 1 ಜಯನಗರ ಕೋ ಅಪರೇಟೀವ್ ಸೊಸೈಟಿ 1ನೇ ಹಂತದಲ್ಲಿ 26831 ಚದರ ಮೀಟರ್ ಪಾರ್ಕ್ ಜಾಗವಿದ್ದು ಅದರಲ್ಲಿ ಸುಮಾರು 3000 ಚದರ ಮೀಟರ್ ಪಾರ್ಕ್ ಜಾಗವನ್ನು ಒತ್ತುವರಿ ಮಾಡಿ ಬೇಲಿ ಹಾಕಲಾಗಿತ್ತು. ದಕ್ಷಿಣ ನಗರ ಪಾಲಿಕೆಯ ಉತ್ತರಹಳ್ಳಿ ಉಪ ವಿಭಾಗದಿಂದ ಪೊಲೀಸ್ ಬಂದೋಬಸ್ತ್ನೊಂದಿಗೆ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲಾಯಿತು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ತಿಳಿಸಿದರು.

ಕಸ ಎಸೆತ: ₹30 ಲಕ್ಷ ದಂಡ ವಸೂಲಿ

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದ್ದು ಮೂರು ತಿಂಗಳಲ್ಲಿ ₹30 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು. ಸಾರ್ವಜನಿಕರ ಸ್ಥಳ ಹಾಗೂ ಸರ್ಕಾರಿ ಸ್ವತ್ತುಗಳಲ್ಲಿ ಕಸ ಎಸೆಯುವುದನ್ನು ಶೇಖರಿಸುವುದನ್ನು ಅಥವಾ ಬ್ಲ್ಯಾಕ್ ಸ್ಪಾಟ್ ತಡೆಗಟ್ಟುವ ಸಲುವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲಾಗುತ್ತಿದೆ. ಕಿರಿಯ ಆರೋಗ್ಯ ಪರಿವೀಕ್ಷಕರು. ಲಿಂಕ್ ವರ್ಕರ್ ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ವಾರ್ಡ್ ವ್ಯಾಪ್ತಿಯಲ್ಲಿನ ನಿವಾಸಿಗಳನ್ನು ವಿಚಾರಿಸಿದಾಗ ಕೆಲವು ನಿವಾಸಿಗಳು ಕಸವನ್ನು ಸಂಗ್ರಹಿಸುವ ಆಟೊಗಳು ನಿಗದಿತ ವೇಳೆಯಲ್ಲಿ ಬರುತ್ತಿಲ್ಲ. ಆಟೊಗಳು ಬರುವ ವೇಳೆಯಲ್ಲಿ ನಿವಾಸಿಗಳು ಕೆಲಸ ಕಾರ್ಯಗಳಿಗೆ ತೆರಳುವುದಾಗಿ ತಿಳಿಸಿರುತ್ತಾರೆ. ಇಂತಹ ನಿವಾಸಿಗಳಿಗೆ ತ್ಯಾಜ್ಯವನ್ನು ಪ್ರತ್ಯೇಕಿಸಿ ಮನೆಯ ಬಾಗಿಲಿನ ಬಳಿ ಇಡಲು ಹಾಗೂ ಮನೆಯ ಬಾಗಿಲಿನ ಬಳಿ ಇಟ್ಟಿರುವ ಕಸಗಳನ್ನು ಸಂಗ್ರಹಿಸಲು ತ್ಯಾಜ್ಯ ಸಂಗ್ರಹಣೆದಾರರಿಗೆ ಸೂಚಿಸಲಾಗಿರುತ್ತದೆ ಎಂದರು.

3802 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 3802 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ಕೆ ಆಯುಕ್ತ ಕೆ.ಎನ್. ರಮೇಶ್ ಅವರು ಮಂಗಳವಾರ ಚಾಲನೆ ನೀಡಿದರು. ಸಾಂಕೇತಿಕವಾಗಿ 15 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ 2014 ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರದ ನಿಯಂತ್ರಣ ಮತ್ತು ಪರವಾನಿಗೆ) ಯೋಜನೆ 2020ಯಂತೆ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು 2024ರ ಸೆಪ್ಟೆಂಬರ್ 20ರಿಂದ 2025ರ ಜನವರಿ 6ವರೆಗೆ ನಡೆಸಲಾಗಿದೆ ಎಂದರು. ದಕ್ಷಿಣ ನಗರ ಪಾಲಿಕೆ ಗುರುತಿಸಿರುವ ಇನ್ನುಳಿದ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಿಗಳಿಗೆ ಅವರು ವ್ಯಾಪಾರ ಮಾಡುವ ಸ್ಥಳದಲ್ಲೇ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು. ಗುರುತಿನ ಚೀಟಿ ಪಡೆದಿರುವಂಥ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಬೀದಿ ಬದಿ ವ್ಯಾಪಾರ ಅವಕಾಶ ನೀಡುತ್ತಿದ್ದು ವ್ಯಾಪಾರದ ಸಂದರ್ಭದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಗುರುತಿನ ಚೀಟಿ ಹೊಂದಿಲ್ಲದೇ ವ್ಯಾಪಾರ ಮಾಡುವುದು ಅಕ್ರಮವಾಗಿದ್ದು ಅಂತಹ ಬೀದಿ ಬದಿ ವ್ಯಾಪಾರಿಗಳ ಮಾಹಿತಿಯನ್ನು ಪಾಲಿಕೆಗೆ ನೀಡುವಂತೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.