ಬೆಂಗಳೂರು: ಸುರ್ವೆ ಕಲ್ಚರಲ್ ಅಕಾಡೆಮಿಯು 31ನೇ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ‘ರಾಷ್ಟ್ರೀಯ ಕಲಾವಿಭೂಷಣ ರಾಷ್ಟ್ರ ಪ್ರಶಸ್ತಿ’ಗೆ ಮೃದಂಗ ಕಲಾವಿದ ಎಂ. ವಾಸುದೇವರಾವ್ ಮೋಹಿತೆ ಆಯ್ಕೆಯಾಗಿದ್ದಾರೆ.
ಸಮಾಜಸೇವಾ ಕ್ಷೇತ್ರದಲ್ಲಿ ಲಕ್ಷ್ಮೀದೇವಿ, ಗ್ರಂಥಾಲಯ ಕ್ಷೇತ್ರದಲ್ಲಿ ರಾಮ್‌ಕಲಾಲ್, ಶಿಕ್ಷಣ ಕ್ಷೇತ್ರದಲ್ಲಿ ರವೀಂದ್ರನಾಥ ವಿ. ದೇಮಶೆಟ್ಟಿ, ಕೃಷಿ ಕ್ಷೇತ್ರದಲ್ಲಿ ಅಂಬರೀಷ್ ಜಿ. ಗೊಂದಾಳ್, ತಾಂತ್ರಿಕ ಕ್ಷೇತ್ರದಲ್ಲಿ ರವೀಂದ್ರ ನವಲೆ, ಸಾಮಾಜಿಕ ಕ್ಷೇತ್ರದಲ್ಲಿ ಕೀರ್ತಿ ಗರಗ, ಜಾನಪದ ಕ್ಷೇತ್ರದಲ್ಲಿ ನೀಲಪ್ಪ ಚಂ. ಹಡಪದ, ಸಹಕಾರ ಕ್ಷೇತ್ರದಲ್ಲಿ ಅಶೋಕ್ ಗ. ಹವಳೆ, ಶಿಕ್ಷಣ ಕ್ಷೇತ್ರದಲ್ಲಿ ಬಾಳಪ್ಪ ನ. ಬಶೆಟ್ಟಿ, ಖಾಜಪ್ಪ ಬಿ. ಬೋಳೆಗಾಂವ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಂಗಾಧರ್ ಬ. ನಾಗಣಿ ಆಯ್ಕೆಯಾಗಿದ್ದಾರೆ.
ಇದೇ 10ರಂದು ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಇದೇ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಸಂಸ್ಥಾಪನಾಧ್ಯಕ್ಷ ರಮೇಶ ಸುರ್ವೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.