ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ: ಬಸ್ ನಿಲ್ದಾಣ ನಿರ್ಮಾಣಕ್ಕೆ ಮನವಿ

Last Updated 23 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

‘ಬಸ್ ನಿಲ್ದಾಣ ನಿರ್ಮಿಸಿ’

ಜಯನಗರದ 4ನೇ ಬ್ಲಾಕ್‌ನ ಲಲಿತ ಜ್ಯುವೆಲರಿ ಮಾರ್ಟ್‌ ಎದುರಿನಲ್ಲಿ ಬಸ್‌ ನಿಲ್ದಾಣ ನಿರ್ಮಿಸಬೇಕು. ಸಂಜಯ ಗಾಂಧಿ ಆಸ್ಪತ್ರೆ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆಗೆ ಹಾಗೂ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಅಗತ್ಯ ಬಿಎಂಟಿಸಿ ಬಸ್‌ಗಳು ಸಂಚರಿಸಲು ಕ್ರಮ ಕೈಗೊಳ್ಳಬೇಕು. ಈ ಭಾಗದಲ್ಲಿ ಬಸ್‌ ನಿಲ್ದಾಣವಿಲ್ಲ. ಹಿರಿಯ ನಾಗರಿಕರಿಗೆ ಹಾಗೂ ಇತರೆ ಪ್ರಯಾಣಿಕರು ಮಳೆ, ಬಿಸಿಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಬಸ್‌ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

ಎಚ್. ದೊಡ್ಡ ಮಾರಯ್ಯ,ಪ್ರಯಾಣಿಕ

***

‘ಮ್ಯಾನ್‌ಹೋಲ್ ಸರಿಪಡಿಸಿ’

ಯಶವಂತಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ಸಂಖ್ಯೆ 198ರ ಬನಶಂಕರಿ 6ನೇ ಹಂತ, ಬಿಡಿಎ 4ನೇ ‘ಟಿ’ ಬ್ಲಾಕ್‌ ಮುಂದುವರಿದ ಬಡಾವಣೆಯ ಮೊದಲನೇ ರಸ್ತೆಯಲ್ಲಿನ (ತಲಘಟ್ಟಪುರದಿಂದ ಬರುವ ಸ್ಯಾನಿಟರಿ ಲೇನ್) ಬಿಡಬ್ಲೂಎಸ್ಎಸ್‌ಬಿ ಮ್ಯಾನ್‌ಹೋಲ್ ತುಂಬಿದ ಕಾರಣ ಕಲುಷಿತ ನೀರು ಹೊರಬಂದು, ರಸ್ತೆಯ ಮೇಲೆ ಹರಿಯತೊಡಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಮತ್ತು ಪಕ್ಕದಲ್ಲಿ ವಾಸಿಸುವ ನಿವಾಸಿಗಳಾದ ನಾವು ನರಕಯಾತನೆಯನ್ನು ಅನುಭವಿಸುತ್ತಿದ್ದೇವೆ. ಮತ್ತೊಂದೆಡೆ ಅದೇ ರಸ್ತೆಯಲ್ಲಿ ಅಂಡರ್‌ಗ್ರೌಂಡ್ ಸ್ಯಾನಿಟರಿ ಕಾಮಗಾರಿ ನಡೆದಿದ್ದು, ಓಡಾಡಲು ರಸ್ತೆ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ, ಮ್ಯಾನ್‌ಹೋಲ್‌ ಅನ್ನು ದುರಸ್ತಿಗೊಳಿಸಿ ಸ್ವಚ್ಛತೆ ಕಾಪಾಡಬೇಕು.

ಮಲ್ಲೇಶ್ ವಿ.,ಸ್ಥಳೀಯ ನಿವಾಸಿ

***

‘ಪಾದಚಾರಿ ಮಾರ್ಗವೂ ಒತ್ತುವರಿ’

ಚಿಕ್ಕಪೇಟೆಯ ವಾರ್ಡ್‌ ನಂ.109ರ ಆಸ್ಪತ್ರೆ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಪಾಲಿಕೆ ಅಧಿಕಾರಿಗಳ ಸಹಾಯದಿಂದ ಗೋಡೆಯನ್ನು ನಿರ್ಮಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಸಹಕಾರ ನೀಡಿರುವ ಅಧಿಕಾರಗಳ ನಡೆ ಖಂಡನೀಯ. ಈ ಮಾರ್ಗದಲ್ಲಿ ಸಾರ್ವಜನಿಕರು ಸಂಚರಿಸಲು ತೊಂದರೆಯಾಗುತ್ತಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಮುಖ್ಯರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿವಪ್ರಸಾದ್,ಸ್ಥಳೀಯ ನಿವಾಸಿ

****

‘ರಸ್ತೆ ದುರಸ್ತಿ ಯಾವಾಗ?’

ಕಸ್ತೂರಬಾ ನಗರ ಮತ್ತು ಮಲ್ಲೇಶ್ವರ ರಸ್ತೆಗಳಲ್ಲಿ ಗುಂಡಿಗಳಿದ್ದು, ದುರಸ್ತಿಯಾಗಬೇಕಾಗಿದೆ. ಬಹಳ ತಿಂಗಳಿಂದ ಸಮಸ್ಯೆ ಹಾಗೆಯೇ ಇದ್ದು, ಇದುವರೆಗೂ ದುರಸ್ತಿ ಮಾಡಿಲ್ಲ. ಗುಂಡಿ ಇರುವ ಕಾರಣ ಭಾರಿ ಮಳೆಯಿಂದ ವಾಹನ ಸವಾರರಿಗೆ, ಜನ ಸಾಮಾನ್ಯರಿಗೆ ಓಡಾಡಲು ಸಮಸ್ಯೆಯಾಗುತ್ತಿದ್ದು. ರಾತ್ರಿ ವೇಳೆಯಲ್ಲಿ ಕೆಲವೊಮ್ಮೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಬಿಬಿಎಂಪಿ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು.

ಆದಿತ್ಯ ಜೇವೂರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT