ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ಜನರ ಧ್ವನಿಯಾಗುವೆ: ರಾಜೀವ್‌ ಗೌಡ

Published 25 ಏಪ್ರಿಲ್ 2024, 15:43 IST
Last Updated 25 ಏಪ್ರಿಲ್ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಇಲ್ಲಿಂದ ಆಯ್ಕೆಯಾಗಿ ದೆಹಲಿಗೆ ಹೋದ ಬಿಜೆಪಿಯವರು ಕಾಲ ಹರಣ ಮಾಡಿ ಜನರನ್ನು ವಂಚಿಸಿದರೇ ಹೊರತು ಜನರ ಬವಣೆಗಳ ಕುರಿತು ಯಾವುದೇ ಆಸಕ್ತಿ ಇರಲಿಲ್ಲ. ನಾನು ಲೋಕಸಭೆಗೆ ಆಯ್ಕೆಯಾದರೆ ಜನರಧ್ವನಿಯಾಗಿ ಕೆಲಸ ಮಾಡುವೆ’ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಜೀವ್‌ ಗೌಡ ತಿಳಿಸಿದರು.

ಲೋಕಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಗುರುವಾರ ವಿವಿಧೆಡೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮತದಾರರೊಂದಿಗೆ ಚರ್ಚಿಸಿದರು. ’ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಇಲ್ಲಿಂದ ಆಯ್ಕೆಯಾಗಿರುವವರು ರಾಜ್ಯಕ್ಕಾಗಿರುವ ಮೋಸದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ‘ ಎಂದು ವಿವರಿಸಿದರು.

‘ದೇಶದ ವಿವಿಧ ರಾಜ್ಯಗಳಲ್ಲಿ ಕುದುರೆ ವ್ಯಾಪಾರದ ಮೂಲಕ ಜನಪ್ರತಿನಿಧಿಗಳನ್ನು ಖರೀದಿಸಿ, ಜನಪರ ಸರ್ಕಾರಗಳನ್ನು ಬೀಳಿಸುತ್ತಿರುವ ಬಿಜೆಪಿಯ ನಾಯಕರು ಸರ್ವಾಧಿಕಾರದ ಕನಸು ಕಾಣುತ್ತಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನನ್ನನ್ನು ಗೆಲ್ಲಿಸಿ’ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT