ಬೆಂಗಳೂರು: ನಗರದ ಭಾರತ್ ಇಂಡಸ್ಟ್ರಿಯಲ್ ಸೇಫ್ಟಿ ಮ್ಯಾನೇಜ್ಮೆಂಟ್ ಸಂಸ್ಥೆ (ಬಿಐಐಎಸ್ಎಂ) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಒಂದು ವರ್ಷದ ಇಂಡಸ್ಟ್ರೀಯಲ್ ಸೇಫ್ಟಿ ಮ್ಯಾನೇಜ್ಮೆಂಟ್ ಕೋರ್ಸ್ ಕುರಿತು ಒಪ್ಪಂದ ಮಾಡಿಕೊಂಡಿವೆ.

ಸಂಸ್ಥೆಯು ಪ್ರಾಯೋಗಿಕ ತರಬೇತಿ ಹಾಗೂ ಉದ್ಯೋಗಾವಕಾಶಗಳ ಒದಗಿಸುವ ಕುರಿತು ಹೆಚ್ಚಿನ ಒತ್ತು ನೀಡುತ್ತಿದೆ.

ಸಂಸ್ಥೆಯ ಅಧ್ಯಕ್ಷ ಉಚಿತ್ ಆರ್. ರಂಗಸ್ವಾಮಿ ಮಾತನಾಡಿ, ‘ಕೈಗಾರಿಕಾ ಕ್ಷೇತ್ರಕ್ಕೆ ತಕ್ಕ ಪರಿಣತಿ ಹೊಂದಿದ ವೃತ್ತಿಪರರನ್ನು ರೂಪಿಸುವುದು ಮುಖ್ಯ ಉದ್ದೇಶ. ಭಾರತ್ ಸಂಸ್ಥೆಯಲ್ಲಿ ಸೈದ್ಧಾಂತಿಕ ಜ್ಞಾನ ಮಾತ್ರವಲ್ಲದೆ, ಕೈಗಾರಿಕೆಯಲ್ಲಿ ಕೆಲಸ ಮಾಡಲು ಅಗತ್ಯವಿರುವ ಕೌಶಲಗಳ ಬಗ್ಗೆ ಹೇಳಿಕೊಡಲಾಗುತ್ತದೆ ’ ಎಂದು ಹೇಳಿದರು.

ನಿರ್ದೇಶಕ ರಜತ್ ಮಾತನಾಡಿ, ‘ಕೈಗಾರಿಕಾ ಸಂಸ್ಥೆಗಳ ಜೊತೆಗೆ ಉತ್ತಮ ಸಹಕಾರ ಬೆಳೆಸುವುದರ ಮೂಲಕ ಇಂಟರ್ನ್ಶಿಪ್, ಪ್ರಾಯೋಗಿಕ ಅನುಭವ ಮತ್ತು ಖಚಿತ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಸಂಸ್ಥೆಯ ಪ್ರಾಚಾರ್ಯ ಕೆ.ಎಸ್. ಮುರುಳೀಧರ್ ಮಾತನಾಡಿ, ‘ಜ್ಞಾನ ಮತ್ತು ಉದ್ಯೋಗಾವಕಾಶಗಳ ಸಮನ್ವಯದ ಮೂಲಕ ಭಾರತ್ ಇಂಡಸ್ಟ್ರಿಯಲ್ ಸೇಫ್ಟಿ ಮ್ಯಾನೇಜ್ಮೆಂಟ್ ಸಂಸ್ಥೆಯು ವೃತ್ತಿಪರ ಶಿಕ್ಷಣದಲ್ಲಿ ಹೊಸ ಮಾದರಿಯನ್ನೇ ಸ್ಥಾಪಿಸಲು ಮುಂದಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.