ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದಲ್ಲಿ ಹೂಡಿಕೆಗೆ ವೇಲ್ಸ್ ಒಲವು: ಬ್ರಿಟನ್‌ ಕಾರ್ಯದರ್ಶಿ ಡೇವಿಡ್

Published 12 ಫೆಬ್ರುವರಿ 2024, 16:36 IST
Last Updated 12 ಫೆಬ್ರುವರಿ 2024, 16:36 IST
ಅಕ್ಷರ ಗಾತ್ರ

ಬೆಂಗಳೂರು: ಸೆಮಿಕಂಡಕ್ಟರ್‌, ವೈಮಾಂತರಿಕ್ಷ, ಆಟೊಮೋಟಿವ್, ಆಹಾರ ಮತ್ತು ಪಾನೀಯ, ಮೆಡ್-ಟೆಕ್, ಫಿನ್-ಟೆಕ್ ಹಾಗೂ ಮರುಬಳಕೆ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ವೇಲ್ಸ್ ಕರ್ನಾಟಕದತ್ತ ಚಿತ್ತ ಹರಿಸಿದೆ ಎಂದು ಬ್ರಿಟನ್‌ ಕಾರ್ಯದರ್ಶಿ (ವೇಲ್ಸ್) ಡೇವಿಡ್ ಡೇವಿಸ್‌ ಹೇಳಿದರು.

ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ನಂತರ ಅವರು ಮಾತನಾಡಿದರು.

ತಂತ್ರಜ್ಞಾನ ಕ್ಷೇತ್ರಗಳಲ್ಲಿ ವೇಲ್ಸ್‌ ಪರಿಣತಿ ಹೊಂದಿದೆ. ಕರ್ನಾಟಕದ ಜತೆಗೆ ಕೈಗಾರಿಕಾ ಸಹಭಾಗಿತ್ವದ ಹೊಂದಲು, ಹೆಚ್ಚಿನ ಹೂಡಿಕೆ ಮಾಡಲು ಸಿದ್ಧವಿದ್ದೇವೆ. ಈ ಕುರಿತು ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು. 

ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಬೆಂಗಳೂರಿನ ಸಮೀಪ ಎರಡು ಸಾವಿರ ಎಕರೆಯಲ್ಲಿ ಜಾಗತಿಕ ದರ್ಜೆಯ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರ (ಕೆಎಚ್ಐಆರ್ ಸಿಟಿ) ನಿರ್ಮಾಣವಾಗುತ್ತಿದೆ. ವೇಲ್ಸ್‌ನ ಹಲವು ಕಂಪನಿಗಳು ಹೂಡಿಕೆ ಮಾಡುತ್ತಿವೆ. ರಾಜ್ಯದಲ್ಲಿ ಏರೋಸ್ಪೇಸ್‌, ರಕ್ಷಣೆ ಮತ್ತು ಮಷೀನ್‌ ಟೂಲ್ಸ್ ಕ್ಷೇತ್ರಗಳಲ್ಲೂ ಹೂಡಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ‘ಶುದ್ಧ ಇಂಧನ ನೀತಿ’ ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್‌ ಸಮಯದಲ್ಲಿ ಭಾರತ ಮತ್ತು ಬ್ರಿಟನ್‌ ಜತೆಗೂಡಿ ಕೆಲಸ ಮಾಡಿವೆ. ಬ್ರಿಟನ್‌ನಲ್ಲಿನ ವೈದ್ಯಕೀಯ ಸಿಬ್ಬಂದಿ ಕೊರತೆ ನೀಗಿಸಲು ಕರ್ನಾಟಕ ಸಹಕರಿಸಲಿದೆ. ಅವರು ಇಚ್ಛಿಸಿದರೆ ಸೂಕ್ತ ತರಬೇತಿ ನೀಡಿ, ರಾಜ್ಯದ ಮಾನವ ಸಂಪನ್ಮೂಲ  ಸಜ್ಜುಗೊಳಿಸಲಾಗುವುದು ಎಂದರು.

ಬ್ರಿಟನ್‌ ಡೆಪ್ಯುಟಿ ಹೈಕಮಿಷನರ್‌ ಚಂದ್ರು ಅಯ್ಯರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT