ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಧರಿಸಿಯೇ ವ್ಯವಹರಿಸಿ

ವಯಸ್ಕರು 7x9, ಮಕ್ಕಳು 5 x7 ಇಂಚಿನ ಮಾಸ್ಕ್‌ ಧರಿಸಲು ಆರೋಗ್ಯ ಇಲಾಖೆ ಸೂಚನೆ
Last Updated 10 ಏಪ್ರಿಲ್ 2020, 4:24 IST
ಅಕ್ಷರ ಗಾತ್ರ

ಬೆಂಗಳೂರು: ಅಪರಿಚಿತರೊಂದಿಗೆ ವ್ಯವಹರಿಸುವಾಗ ಹಾಗೂ ಸಾರ್ವಜನಿಕ ಸ್ಥಳಗಳಿಗೆ ತೆರಳುವಾಗ ಮುಖಗವಸು ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಎಲ್ಲರೂ ಮಾಸ್ಕ್‌ ಧರಿಸಬೇಕಾದ ಅಗತ್ಯವಿಲ್ಲ ಎಂದು ಈ ಹಿಂದೆ ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೆ, ಈಗ ಸೋಂಕಿನಿಂದ ಅಂತರ ಕಾಯ್ದುಕೊಳ್ಳಲು ಮುಖಗವಸನ್ನು ಹಾಕಿಕೊಳ್ಳುವಂತೆ ತಿಳಿಸಿದೆ.ಅಗತ್ಯ ವಸ್ತುಗಳ ಖರೀದಿಗೆ ತೆರಳುವ ವೇಳೆ, ಕಚೇರಿ ಕೆಲಸಗಳಲ್ಲಿ ನಿರತರಾಗಿರುವಾಗ ಮುಖಗವಸನ್ನು ಧರಿಸಬೇಕು. ಕೊರೊನಾ ಸೋಂಕಿತ
ರೊಂದಿಗೆಗೊತ್ತಿಲ್ಲದೆಯೇ ಸಂಪರ್ಕ ಸಾಧಿಸುವ ಸಾಧ್ಯತೆ ಇರುತ್ತದೆ. ಹಾಗಾಗಿಮಾಸ್ಕ್‌ ಧರಿಸುವುದು ಸೂಕ್ತ ಎಂದು ಇಲಾಖೆ ತಿಳಿಸಿದೆ.

ವಯಸ್ಕರು ಧರಿಸುವ ಮಾಸ್ಕ್‌ 7x9 ಇಂಚು ಮತ್ತು ಮಕ್ಕಳು ಧರಿಸುವ ಮಾಸ್ಕ್‌ 5 x7 ಇಂಚು ಅಳತೆ ಇರಬೇಕು. ಬಳಸದೇ ಇರುವ ಬನಿಯನ್‌, ಟೀ ಶರ್ಟ್‌ ಅಥವಾ ಕರವಸ್ತ್ರದಂತಹ ಹತ್ತಿ ಬಟ್ಟೆಯಿಂದ ಮನೆಯಲ್ಲೇ ಮಾಸ್ಕ್ ತಯಾರಿಸಿಕೊಳ್ಳಬಹುದು. ಸಿಂಥೆಟಿಕ್‌ ಬಟ್ಟೆಗಳನ್ನು ಬಳಸುವುದು ಸೂಕ್ತವಲ್ಲ.ಮನೆಯಲ್ಲೇ ಸಿದ್ದಪಡಿಸುವ ಮಾಸ್ಕ್‌ಗಳನ್ನು ಶುಚಿಗೊಳಿಸಿ, ಮರುಬಳಕೆ ಮಾಡಬಹುದಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

8 ದಿನಗಳಲ್ಲಿ 100 ಪ್ರಕರಣಗಳು: ‘ರಾಜ್ಯದಲ್ಲಿ ಮೊದಲ 50 ಕೋವಿಡ್–19 ಪ್ರಕರಣಗಳು 16 ದಿನಗಳಲ್ಲಿ ವರದಿಯಾಗಿದ್ದವು. 50ರಿಂದ 100 ಪ್ರಕರಗಳು 8 ದಿನಗಳಲ್ಲಿ, 100ರಿಂದ 150 ಪ್ರಕರಣಗಳು 4 ದಿನಗಳಲ್ಲಿ ಹಾಗೂ 150ರಿಂದ 197 ಪ್ರಕರಣಗಳು 4 ದಿನಗಳಲ್ಲಿ ವರದಿಯಾಗಿವೆ. ಸೋಂಕಿತರನ್ನು ಬೇಗ ಪತ್ತೆಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 30 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ’ ಎಂದು ಸಚಿವ ಎಸ್. ಸುರೇಶ್ ಕುಮಾರ್ಮಾಹಿತಿ ನೀಡಿದರು.

ಫಿವರ್ ಕ್ಲಿನಿಕ್ ಸಂಖ್ಯೆ ಹೆಚ್ಚಳ

ನಗರ ಪ್ರದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪತ್ತೆಗೆ ಶೇ 50 ರಷ್ಟು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಫಿವರ್ ಕ್ಲಿನಿಕ್ ಆಗಿ ಬದಲಿಸಲು ಆರೋಗ್ಯ ಇಲಾಖೆ ಆದೇಶಿಸಿದೆ.

ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳನ್ನು ಏ.11 ರೊಳಗೆ ಫಿವರ್ ಕ್ಲಿನಿಕ್ ಆಗಿ ಮಾರ್ಪಡಿಸಬೇಕು. ಜಿಲ್ಲೆಯ ವಿಪತ್ತು ನಿರ್ವಹಣಾ ಅನುದಾನ ಬಳಸಿಕೊಂಡು ಥರ್ಮಲ್ ಸ್ಕ್ಯಾನರ್, ಎನ್-95 ಮಾಸ್ಕ್, ಸ್ಯಾನಿಟೈಜರ್, ಸುರಕ್ಷಾ ಕವಚಗಳನ್ನು ಕ್ಲಿನಿಕ್‍ಗಳಿಗೆ ಒದಗಿಸಬೇಕು. ಪ್ರತಿ ದಿನ ವೈದ್ಯಕೀಯ ತ್ಯಾಜ್ಯವನ್ನು ನಿಯಮದಂತೆ ವಿಲೇವಾರಿ ಮಾಡಬೇಕು. ಆಪ್ತ ಸಮಾಲೋಚನೆ ಸೇವೆಯನ್ನೂ ನೀಡಬೇಕು ಎಂದು ಸೂಚಿಸಲಾಗಿದೆ.

ಖಾಸಗಿ ಕ್ಲಿನಿಕ್, ಆಸ್ಪತ್ರೆಗಳು ಕೂಡ ಫಿವರ್ ಕ್ಲಿನಿಕ್‌ಗಳನ್ನು ಆರಂಭಿಸಬಹುದು. ಕ್ಲಿನಿಕ್ ಆರಂಭಿಸಲು ಖಾಸಗಿಯವರು ಮುಂದೆ ಬಂದರೆ ಅವರಿಗೆ ಅನುಮತಿ, ತರಬೇತಿ ಹಾಗೂ ಉಪಕರಣ, ಸ್ವರಕ್ಷಾ ಕವಚವನ್ನು ಅಧಿಕಾರಿಗಳು ಒದಗಿಸಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT