ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಲ ಸ್ವಚ್ಛತೆಗೆ ಯಂತ್ರ ಬಳಕೆ–ಸರ್ಕಾರ ನಿರುತ್ಸಾಹ’

Last Updated 5 ಜೂನ್ 2021, 22:29 IST
ಅಕ್ಷರ ಗಾತ್ರ

ಬೆಂಗಳೂರು:‘ಮಲ ಸ್ವಚ್ಛತೆಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡಿದರೆ, ಮಲದ ಗುಂಡಿಗೆ ಇಳಿದು ಪ್ರಾಣ ಕಳೆದುಕೊಳ್ಳುತ್ತಿರುವವರ ಪ್ರಮಾಣ ಕ್ರಮೇಣ ಕಡಿಮೆಯಾಗಲಿದೆ. ಆದರೆ, ಸರ್ಕಾರಗಳು ಇದಕ್ಕೆ ಸಿದ್ಧವಿಲ್ಲ’ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ದಲಿತ ಹಕ್ಕುಗಳ ಸಮಿತಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಕೊರೊನಾ ಕಂಬನಿಯ ಕುಯಿಲು’ ಸರಣಿಯಲ್ಲಿ ದಲಿತರ ಸ್ಥಿತಿಗತಿ ಕುರಿತು ಮಾತನಾಡಿದರು.

‘ಮಲಸ್ವಚ್ಛಗೊಳಿಸುವವರು ಪ್ರತಿ ಬಾರಿ ಪ್ರಾಣ ಕಳೆದುಕೊಂಡಾಗಲೂ ಆ ವಿಚಾರವನ್ನು ಸರ್ಕಾರಗಳ ಮುಂದೆ ಇಡುತ್ತೇನೆ. ಆದರೆ, ಮುಂದೇನು ಮಾಡುವುದು? ಎಂದು ನನಗೇ ಮರುಪ್ರಶ್ನೆ ಮಾಡುತ್ತಾರೆ’ ಎಂದರು.

‘ಕೋವಿಡ್‌ನಿಂದ ಕೆಲಸ ಕಳೆದುಕೊಂಡಿರುವ ಅನೇಕರು ಹಳ್ಳಿಗಳತ್ತ ತೆರಳಿದ್ದಾರೆ. ಈ ವೇಳೆ ಎಲ್ಲ ರೀತಿಯ ಅಭಿವೃದ್ಧಿ ಕೆಲಸ ನಿಲ್ಲಿಸಿ, ಗ್ರಾಮೀಣ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಬೇಕು. ಇದರಿಂದ ನಗರದತ್ತ ವಲಸೆ ನಿಯಂತ್ರಣಕ್ಕೆ ಬರಲಿದೆ. ಪೋಲಿಯೊ ಲಸಿಕೆ ಮಾದರಿ ಕೋವಿಡ್‌ ಲಸಿಕೆಯನ್ನೂ ಮನೆ ಮನೆಗೆ ತೆರಳಿ ಹಾಕಬೇಕು’ ಎಂದರು.

ದಲಿತ ಸಂಘರ್ಷ ಸಮಿತಿಯ(ಅಂಬೇಡ್ಕರ್ ವಾದ) ಸಂಚಾಲಕ ಮಾವಳ್ಳಿ ಶಂಕರ್,‘ರಾಮನಗರದ ಮ್ಯಾನ್‌ಹೋಲ್‌ ದುರಂತದಲ್ಲಿ ಮೂವರು ಮೃತಪಟ್ಟ ಘಟನೆ ಖಂಡನೀಯ. ಇಷ್ಟೆಲ್ಲಾ ಆಧುನಿಕ ತಂತ್ರಜ್ಞಾನಗಳು ಬಂದರೂ ಇದೇ ಸ್ಥಿತಿ ಮುಂದುವರಿದಿದೆ. ವಿಶ್ವಗುರುವಾದ ಮೋದಿ ಅವರು ಏನು ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ದಲಿತ ಹಕ್ಕುಗಳ ಸಮಿತಿಯ ಯು.ಬಸವರಾಜ,‘ಕೊರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಸರ್ಕಾರ ಬಡವರು ಹಾಗೂ ದಲಿತರಿಗೆ ತಿಂಗಳಿಗೆ ₹10 ಸಾವಿರ ಸಹಾಯಧನ ವಿತರಿಸಬೇಕು’ ಎಂದು ಆಗ್ರಹಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT