ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾರ್ಹತೆ ಹೆಚ್ಚಿಸುವ ಭಾಷಾ ಕಲಿಕೆ: ಭಾಷಾ ತಜ್ಞರು

Last Updated 2 ಆಗಸ್ಟ್ 2021, 23:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ವತಿಯಿಂದ ‘ವಿದೇಶಿ ಭಾಷೆಗಳು‘ ಕುರಿತು ಮೂರು ವಾರ ನಡೆದ ಅಂತರರಾಷ್ಟ್ರೀಯ ವೆಬಿನಾರ್‌ ಶನಿವಾರ ಮುಕ್ತಾಯವಾಯಿತು.

‘ವಿದೇಶಿ ಭಾಷೆಗಳ ಕಲಿಕೆ ಎಷ್ಟು ಉಪಯೋಗಿ’ ಎಂಬ ಕುರಿತು ನಡೆದ ಅಂತರರಾಷ್ಟ್ರೀಯ ವೆಬಿನಾರ್‌ನಲ್ಲಿ ದೇಶ–ವಿದೇಶಗಳ ಭಾಷಾ ತಜ್ಞರು ಉಪನ್ಯಾಸ ನೀಡಿದರು. 10 ವಿದೇಶಿ ಭಾಷೆಗಳ ಪರಿಚಯ, ಮಹತ್ವ ಮತ್ತು ವ್ಯಾಪ್ತಿಯ ಕುರಿತು ಭಾಷಾ ವಿದ್ವಾಂಸರು ಚರ್ಚಿಸಿದರು. ‘ಹೆಚ್ಚು ಭಾಷೆಗಳನ್ನು ಕಲಿತಷ್ಟೂ ಹೆಚ್ಚು ಉದ್ಯೋಗಾವಕಾಶಗಳು ಇರುತ್ತವೆ’ ಎಂದು ಉಪನ್ಯಾಸಕರು ಹೇಳಿದರು.

ಫ್ರೆಂಚ್, ಜರ್ಮನ್, ಇಟಾಲಿಯನ್‌, ಸ್ಪ್ಯಾನಿಶ್‌, ಹೆಬ್ರ್ಯೂ, ಕೊರಿಯನ್, ಜಪಾನಿ ಹಾಗೂ ಚೀನಿ ಭಾಷೆಗಳ ಕುರಿತು ಚರ್ಚೆ ನಡೆಯಿತು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಉದ್ಘಾಟಿಸಿದರು. ಪ್ರೊ.ಅಶೋಕ ಕುಮಾರ್‌ ಚಾವ್ಲಾ, ಜಯಂತಿ ಶ್ರೀನಿವಾಸನ್, ಪ್ರೀತಿ ವಿದ್ಯಾನಂದ ಅಲ್ಲದೆ, ಜಪಾನ್‌, ಫ್ರಾನ್ಸ್‌, ಜರ್ಮನಿಯ ವಿಶ್ವವಿದ್ಯಾಲಯಗಳ ಭಾಷಾ ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT