ಬುಧವಾರ, ಜನವರಿ 22, 2020
19 °C

ಉಡುಗೊರೆ ನೆಪದಲ್ಲಿ ₹2.3 ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಮನೋಜ್ ಗುಪ್ತಾ ಎಂಬಾತ ಉಡುಗೊರೆ ಕಳುಹಿಸುವ ನೆಪದಲ್ಲಿ  ₹ 2.30 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ಯುವತಿಯೊಬ್ಬರು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದಾರೆ.

‘ನ. 11ರಂದು ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಮನೋಜ್ ಪರಿಚಯ ಆಗಿದ್ದ. ಇಂಗ್ಲೆಂಡ್‌ನಲ್ಲಿ ನೆಲೆಸಿರುವುದಾಗಿ ಹೇಳಿದ್ದ ಆತ, ಕೋರಿಯರ್ ಮೂಲಕ ಉಡುಗೊರೆ ಕಳುಹಿಸುವುದಾಗಿ ನ. 25ರಂದು ತಿಳಿಸಿದ್ದ.’

‘ಅದಾಗಿ ಕೆಲವೇ ದಿನಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಆರೋಪಿ, ‘ಉಡುಗೊರೆ ರೂಪದಲ್ಲಿ 21,000 ಡಾಲರ್ (₹85 ಲಕ್ಷ) ಹಣ ಬಂದಿದೆ. ಅದನ್ನು ನಿಮ್ಮ ವಿಳಾಸಕ್ಕೆ ಕಳುಹಿಸಲು ತೆರಿಗೆ ಪಾವತಿಸಬೇಕು’ ಎಂದಿದ್ದ. ಅದನ್ನು ನಂಬಿ ಆತ ಹೇಳಿದ್ದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದೆ. ಅದಾದ ನಂತರ ಯಾವುದೇ ಉಡುಗೊರೆ ಬಂದಿಲ್ಲ. ಮನೋಜ್‌ ಸಹ ನಾಪತ್ತೆಯಾಗಿದ್ದಾನೆ’ ಎಂದು ಯುವತಿ ದೂರಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸರು, ‘ಮನೋಜ್ ಗುಪ್ತಾ ತಲೆಮರೆಸಿಕೊಂಡಿದ್ದಾನೆ. ಆತ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಯುವತಿಯನ್ನು ವಂಚಿಸಿರುವ ಮಾಹಿತಿ ಇದೆ’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು