ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು | ಅಗೆದ ರಸ್ತೆ: ಸಂಚಾರ ಅಯೋಮಯ

ನವರಂಗ ವೃತ್ತದಿಂದ ಒರಾಯನ್ ಮಾಲ್‌ವರೆಗಿನ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಾಗಿದ ವೈಟ್‌ ಟಾಪಿಂಗ್‌ ಕಾಮಗಾರಿ
Published : 13 ಅಕ್ಟೋಬರ್ 2025, 23:33 IST
Last Updated : 13 ಅಕ್ಟೋಬರ್ 2025, 23:33 IST
ಫಾಲೋ ಮಾಡಿ
Comments
ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ ನವರಂಗ ವೃತ್ತದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಾಗಿ ಪಾದಚಾರಿ ಮಾರ್ಗ ಅಗೆದು ಹಾಕಲಾಗಿದೆ. ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಎತ್ತಿಕೊಂಡು ಚರಂಡಿಯನ್ನು ದಾಟಿಸಿದರು

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆ ನವರಂಗ ವೃತ್ತದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಾಗಿ ಪಾದಚಾರಿ ಮಾರ್ಗ ಅಗೆದು ಹಾಕಲಾಗಿದೆ. ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಎತ್ತಿಕೊಂಡು ಚರಂಡಿಯನ್ನು ದಾಟಿಸಿದರು

ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್  

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಪೈಪ್‌ಗಳನ್ನು ಇಡಲಾಗಿದೆ

ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಪೈಪ್‌ಗಳನ್ನು ಇಡಲಾಗಿದೆ  

ಪ್ರಜಾವಾಣಿ ಚಿತ್ರ: ಕಿಶೋರ್‌ ಕುಮಾರ್‌ ಬೋಳಾರ್

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಈ ಮಾರ್ಗದ ಮೂಲಕವೇ ಬಸ್‌ಗಳು ಸಂಚರಿಸುತ್ತವೆ. ಒಂದು ತಿಂಗಳ ಹಿಂದೆ ರಸ್ತೆ ಅಗೆದು ಹಾಕಿರುವ ಪರಿಣಾಮ ಬಸ್‌ಗಳು ಬದಲಿ ಮಾರ್ಗದ ಮೂಲಕ ಸಂಚರಿಸುತ್ತಿವೆ. ಇದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ನಾಲ್ಕು ಜನ ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿ ಈಗ ನಾನು ಒಬ್ಬನೇ ಕೆಲಸ ಮಾಡುತ್ತಿದ್ದೇನೆ. ಅಂಗಡಿ ಬಾಡಿಗೆ ಕಟ್ಟುವುದಕ್ಕೂ ಸಾಧ್ಯವಾಗುತ್ತಿಲ್ಲ. 
ಚೇತನ್, ಕಾಂಡಿಮೆಂಟ್ಸ್‌ ಮಾಲೀಕರು
ಡಾ. ರಾಜ್‌ಕುಮಾರ್‌ ರಸ್ತೆಯನ್ನು ಅಗೆದು ಹಾಕಿರುವ ಪರಿಣಾಮ ಇಡೀ ಪ್ರದೇಶವೆಲ್ಲ ದೂಳುಮಯವಾಗಿದೆ. ಇದರಿಂದ ಗ್ರಾಹಕರು ನಮ್ಮ ಹೋಟೆಲ್‌ಗೆ ಬರುತ್ತಿಲ್ಲ. ಹೋಟೆಲ್‌ಗೆ ಹಾಕಿರುವ ಬಂಡವಾಳವೂ ಬರುತ್ತಿಲ್ಲ. ಆದಾಯವೂ ಇಲ್ಲದೇ ನಮ್ಮ ಸ್ಥಿತಿ ಅತಂತ್ರವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡಬೇಕು.
ನಾಗರಾಜ್, ಹೋಟೆಲ್ ಮಾಲೀಕರು
ಒಂದು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ಭಾಗದಲ್ಲಿರುವ ಹೋಟೆಲ್ ಬೇಕರಿಗಳಿಗೆ ಸಾರ್ವಜನಿಕರು ಬರುತ್ತಿಲ್ಲ. ಪಾರ್ಕಿಂಗ್‌ ಮಾಡಲು ಜಾಗವಿಲ್ಲ. ಎಲ್ಲಿ ನೋಡಿದರೂ ಮಣ್ಣಿನ ರಾಶಿ ಅಗೆದಿರುವ ರಸ್ತೆಯೇ ಕಾಣುತ್ತಿದೆ. ನಮ್ಮ ಹೋಟೆಲ್‌ಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.
ಅರುಣಿ, ಹೋಟೆಲ್ ಮಾಲೀಕರು 
ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.
ದಯಾನಂದ್, ಹೋಟೆಲ್ ಉದ್ಯಮಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT