ಶನಿವಾರ, ಜುಲೈ 2, 2022
20 °C

39 ದ್ವಿಚಕ್ರ ವಾಹನ ಕದ್ದವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹ್ಯಾಂಡ್‌ಲಾಕ್‌ ಮುರಿದು ಹಾಗೂ ನಕಲಿ ಕೀ ಬಳಸಿ, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿರುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ವೈಟ್‌ಫೀಲ್ಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹50 ಲಕ್ಷ ಮೌಲ್ಯದ 39 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಆನಂದ್‌ (29), ಪಾವಗಡದ ಮಹಾಲಿಂಗಯ್ಯ (27) ಹಾಗೂ ಚಿತ್ತಯ್ಯ (26) ಬಂಧಿತರು. ಇವರಿಂದ 5 ರಾಯಲ್‌ ಎನ್‌ಫೀಲ್ಡ್‌, 7 ಯಮಹ ಆರ್‌ಎಕ್ಸ್‌, 14 ಹೀರೊ ಹೊಂಡಾ, 2 ಹೊಂಡಾ ಆಕ್ಟಿವಾ, 5 ಹೊಂಡಾ ಡಿಯೊ, 2 ಹೊಂಡಾ ಶೈನ್‌, ತಲಾ ಒಂದು ಬಜಾಬ್‌ ಪಲ್ಸರ್‌, ಯಮಹಾ ಎಫ್‌ಜೆಡ್‌, ಟಿವಿಎಸ್‌ ಸ್ಕೂಟಿ ಹಾಗೂ ಟಿವಿಎಸ್‌ ಎಕ್ಸ್‌ಎಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು