ಬೆಂಗಳೂರು: ನಿದ್ರಿಸುತ್ತಿದ್ದ ಪತ್ನಿಯನ್ನು ಚಾಕುವಿನಿಂದ ಇರಿದು ಪತಿ ಕೊಲೆ ಮಾಡಿದ ಘಟನೆ ಯಶವಂತಪುರದ ಮತ್ತಿಕೆರೆ ಬಳಿ ಬುಧವಾರ ನಸುಕಿನಲ್ಲಿ ನಡೆದಿದೆ.

ಅನುಸೂಯಾ (42) ಕೊಲೆಯಾದ ಮಹಿಳೆ. ಆರೋಪಿ ಧನೇಂದ್ರ (49)ನನ್ನು ಪೊಲೀಸರು ಬಂಧಿಸಿದ್ದಾರೆ.

‘ಟೈಲರಿಂಗ್ ಕೆಲಸ ಮಾಡುತ್ತಿದ್ದ ಧನೇಂದ್ರ ಸಾಲ ಮಾಡಿಕೊಂಡಿದ್ದ. ಈ ವಿಷಯದಲ್ಲಿ ಪತಿ–ಪತ್ನಿ ಮಧ್ಯೆ ಇತ್ತೀಚೆಗೆ ಜಗಳ ನಡೆದಿತ್ತು. ಬುಧವಾರ ಬೆಳಗ್ಗಿನ ಜಾವ ಪತ್ನಿಗೆ ಚೂರಿಯಿಂದ ಇರಿದ ಧನೇಂದ್ರ, ಬಳಿಕ ತನ್ನ 14 ವರ್ಷದ ಮಗಳ ಮೇಲೂ ಹಲ್ಲೆ ನಡೆಸಿದ್ದ. ತೀವ್ರ ರಕ್ತಸ್ತಾವದಿಂದ ಪತ್ನಿ ಮೃತಪಟ್ಟರೆ, ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಲ್ಲಿ 50 ರೂಪಾಯಿಗಾಗಿ 20 ವರ್ಷದ ಸ್ನೇಹಿತನ ಕೊಲೆ ಮಾಡಿದ ಕಿರಾತಕ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.