ಬುಧವಾರ, ಮಾರ್ಚ್ 29, 2023
32 °C

ಫ್ಯಾನ್ಸಿ ಆಭರಣ ಖರೀದಿಸಿದ್ದಕ್ಕೆ ಪತ್ನಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ನಾಜಿಯಾ (35) ಎಂಬುವರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಶೇಖ್ ಫಾರೂಕ್‌ನನ್ನು (42) ಪೊಲೀಸರು ಬಂಧಿಸಿದ್ದಾರೆ.

‘ಮೃತ ನಾಜಿಯಾ, ಆಟೊ ಚಾಲಕ ಫಾರೂಕ್‌ನನ್ನು 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಯಾನಂದ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮನೆ ಬಾಡಿಗೆ ಕೊಡಲೆಂದು ಫಾರೂಕ್, ಪತ್ನಿ ನಾಜಿಯಾ ಕೈಗೆ ನ. 1ರಂದು ₹ 6,500 ಕೊಟ್ಟಿದ್ದ. ಮನೆ ಮಾಲೀಕರಿಗೆ ಹಣ ನೀಡದ ನಾಜಿಯಾ, ಅದೇ ಹಣದಲ್ಲಿ ಫ್ಯಾನ್ಸಿ ಆಭರಣಗಳನ್ನು ಖರೀದಿಸಿದ್ದರು. ರಾತ್ರಿ ಮನೆಗೆ ಬಂದಿದ್ದ ಪತಿ, ಬಾಡಿಗೆ ಬಗ್ಗೆ ವಿಚಾರಿಸಿದ್ದ. ಬಾಡಿಗೆ ಕೊಟ್ಟಿಲ್ಲವೆಂದು ಹೇಳಿದ್ದ ಪತ್ನಿ, ‘ಫ್ಯಾನ್ಸಿ ಆಭರಣ ತಂದಿದ್ದೇನೆ. ಅದನ್ನು ಮಾರಿದರೆ, ಮತ್ತಷ್ಟು ಲಾಭ ಬರುತ್ತದೆ. ಅದನ್ನೇ ಬಾಡಿಗೆ ಕಟ್ಟುತ್ತೇನೆ’ ಎಂಬುದಾಗಿ ಹೇಳಿದ್ದರು.’

‘ಕೋಪಗೊಂಡಿದ್ದ ಆರೋಪಿ, ಪತ್ನಿ ಮೇಲೆ ಹಲ್ಲೆ ಮಾಡಿದ್ದ. ತಲೆಯನ್ನು ಗೋಡೆಗೆ ಗುದ್ದಿಸಿದ್ದ. ತೀವ್ರ ಗಾಯಗೊಂಡ ನಾಜಿಯಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಳು. ಮನೆಯಲ್ಲಿದ್ದ ಮಗಳು, ತಾಯಿ ರಕ್ಷಣೆಗಾಗಿ ಕೂಗಾಡಿದ್ದಳು. ಸ್ಥಳೀಯರು ಹಾಗೂ ಸಂಬಂಧಿಕರು, ನಾಜಿಯಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ನಾಜಿಯಾ ಅಸುನೀಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಕೊಲೆ ಬಗ್ಗೆ ನಾಜಿಯಾ ಕುಟುಂಬದವರು ದೂರು ನೀಡಿದ್ದರು. ಪರಾರಿಯಾಗಿದ್ದ ಆರೋಪಿ ಶೇಖ್ ಫಾರೂಕ್‌ನನ್ನು ಬಂಧಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು