ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್: 4ನೇ ಬಾರಿ ಕಾಯಿಲೆ ಶಮನ

Last Updated 5 ಫೆಬ್ರುವರಿ 2020, 19:51 IST
ಅಕ್ಷರ ಗಾತ್ರ

ಬೆಂಗಳೂರು:ರಕ್ತ ಕ್ಯಾನ್ಸರ್‌ನಿಂದ (ಮಲ್ಟಿಪಲ್‌ ಮೈಲೋಮಾ) ನಾಲ್ಕು ಬಾರಿ ಬಳಲಿದ್ದ 69 ವರ್ಷದ ಮಹಿಳೆಗೆ ಮೋನೊಕ್ಲೋನಲ್ ಪ್ರತಿಕಾಯ ಥೆರಪಿ ಮೂಲಕ ಕಾಯಿಲೆಯನ್ನು ಶಮನ ಮಾಡಲಾಗಿದೆ.

2014ರಲ್ಲಿ ಮಹಿಳೆ ಈ ಮಾದರಿಯ ಕ್ಯಾನ್ಸರ್‌ಗೆ ಒಳಗಾಗಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ 2015
ರಲ್ಲಿ ಅಸ್ಥಿ ಮಜ್ಜೆ ಕಸಿ ಮಾಡಿಸಿಕೊಂಡಿದ್ದರು. ಮೂರು ವರ್ಷಗಳ ಬಳಿಕ ಇದೇ ಕ್ಯಾನ್ಸರ್ ಅವರಲ್ಲಿ ಮರುಕಳಿಸಿತು. ಕಳೆದ ವರ್ಷ ಪುನಃ ರಕ್ತ ಕ್ಯಾನ್ಸರ್‌ ಜತೆಗೆ ಮೂತ್ರಪಿಂಡದ ಸಮಸ್ಯೆಯೂ ಕಾಣಿಸಿಕೊಂಡ ಪರಿಣಾಮ ಅವರಿಗೆ ಆಸ್ಟರ್ಐವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ‘ಬೆನ್ನು ನೋವು, ರಕ್ತ ಹೀನತೆಸಮಸ್ಯೆಗಳ ಬಗ್ಗೆ ಜನತೆ ಹೆಚ್ಚುತಲೆಕೆಡಿಸಿಕೊಳ್ಳುವುದಿಲ್ಲ. ಈ ಪ್ರಕರಣದಲ್ಲೂ ಹಾಗೇ ಆಗಿದೆ. ಮೋನೊಕ್ಲೋನಲ್ ಪ್ರತಿಕಾಯ ಥೆರಪಿಯಿಂದ ಕಾಯಿಲೆ ಗುಣಪಡಿಸಿದೆವು. ಎಂದು ವೈದ್ಯ ಡಾ.ಎನ್.ಆದಿತ್ಯ ಮುರಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT