ಬೆಂಗಳೂರು: ಉದ್ಯಮ ಒಂದು ಕಾಲಕ್ಕೆ ಮಹಿಳೆಯರಿಗೆ ಸಾಧ್ಯವಾಗದ ಕನಸು ಆಗಿತ್ತು. ಈಗ ಮಹಿಳೆಯರ ಮನಸ್ಥಿತಿ ಬದಲಾಗಿದೆ. ಅವರು ಮನೆಗೆ ಸೀಮಿತವಾಗದೇ ಕೈಗಾರಿಕೋದ್ಯಮಿಗಳಾಗುತ್ತಿದ್ದಾರೆ ಎಂದು ಕೈಗಾರಿಕಾ ಪಾರ್ಕ್ ಮುಖ್ಯಸ್ಥೆ ರೇವತಿ ರಾಜು ಹೇಳಿದರು.

ಗೌರಿಬಿದನೂರಿನಲ್ಲಿ ಎಫ್ಎಲ್ಒ ಕೈಗಾರಿಕಾ ಪಾರ್ಕ್ ಉದ್ಘಾಟನೆಯ ಬಳಿಕ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರಲ್ಲಿ ಉಂಟಾಗಿರುವ ಆಂತರಿಕ ಪರಿವರ್ತನೆಯನ್ನು ಕೈಗಾರಿಕಾ ಪಾರ್ಕ್ ಸೂಚಿಸುತ್ತದೆ. ಉದ್ಯಮದ ಹಾದಿಯಲ್ಲಿ ಮಹಿಳೆಯರು ದಾಪುಗಾಲು ಇಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಬೆಂಗಳೂರಿನಲ್ಲಿ ಕೈಗಾರಿಕಾ ವಲಯಗಳು ತುಂಬಿ ಹೋಗಿವೆ. ಜನದಟ್ಟಣೆ, ವಾಹನದಟ್ಟಣೆ ಹೆಚ್ಚಾಗಿದೆ. ಈ ಸಮಸ್ಯೆಯಿಂದ ಪಾರಾಗಲು, ದೀರ್ಘಕಾಲೀನ ಬೆಳವಣಿಗೆಗೆ ಪೂರಕವಾಗಿರುವಂತೆ ಮಾಡಲು ಗೌರಿಬಿದನೂರಿನಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಮೈಸೂರಿನ ರಾಜಮನೆತನದ ಕಾಮಾಕ್ಷಿದೇವಿ ಒಡೆಯರ್, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.