ಮಹಿಳಾ ಸುರಕ್ಷತೆ ಕಳವಳಕಾರಿ: ವೆಂಕಟರಾವ್

7

ಮಹಿಳಾ ಸುರಕ್ಷತೆ ಕಳವಳಕಾರಿ: ವೆಂಕಟರಾವ್

Published:
Updated:
Deccan Herald

ಬೆಂಗಳೂರು: ಭಾರತದಲ್ಲಿ ಮಹಿಳೆಯರಿಗೆ ಪೂಜನೀಯ ಸ್ಥಾನ ನೀಡಿದ್ದರೂ ಸಹ, ಅವರಿಗೆ ಸುರಕ್ಷತೆ ಇಲ್ಲದಂತಾಗಿದೆ ಎಂದು ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಡಾ.ಆರ್.ವೆಂಕಟರಾವ್ ವಿಷಾದಿಸಿದರು.

ಯಲಹಂಕದ ರಾಜಾನುಕುಂಟೆ ಸಮೀಪದಲ್ಲಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ  ‘ಲಿಂಗತ್ವ ಸಮಾನತೆ’ ಕುರಿತ ಎರಡುದಿನಗಳ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಿಳೆಯರಿಗಾಗಿ ಸಂವಿಧಾನದಲ್ಲಿ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದರೂ ಸಹ, ಅವು ಯಥಾವತ್ತಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ನೀಡದಿದ್ದರೆ ಸಮಾಜ ಜಡವಾಗಲಿದೆ. ಸ್ವಾತಂತ್ರ್ಯ ನೀಡಿದಾಗ ಶಿಕ್ಷಣ, ಸಂಸ್ಕೃತಿ ಮತ್ತು ಆರ್ಥಿಕತೆಯಲ್ಲಿ ಸಬಲೀಕರಣ ಸಾಧಿಸಲು ಸಾಧ್ಯ’ ಎಂದರು.

'ಮಹಿಳೆಯರ ಸಾಮಾಜಿಕ ಸಬಲತೆ ಮತ್ತು ಸಮಾನತೆ ತಮ್ಮ ಕುಟುಂಬದಿಂದಲೇ ಆರಂಭವಾಗಿದೆ. ತಾಯಿಯೇ ಮೊದಲು ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ನಮ್ಮ ಹಿರಿಯರ ನಾಣ್ಣುಡಿಯಾಗಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ತಾಯಂದಿರ ಕೈಯಲ್ಲಿದೆ' ಎಂದರು.

ಸಂಯುಕ್ತ ರಾಷ್ಟ್ರಗಳ ಭಾರತ ಮತ್ತು ಭೂತಾನ್‌ನ ಮಾಹಿತಿ ಕೇಂದ್ರದ ನಿರ್ದೇಶಕ ಡೆರ್ಕ್‌ ಸೆಗಾರ್‌ ಮಾತನಾಡಿ, ‘ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದ್ದರೂ ಲೋಕಸಭೆಯಲ್ಲಿ ಕೇವಲ ಶೇ 11ರಷ್ಟು ಮಾತ್ರ ಇದ್ದಾರೆ. ಅವರಿಗೆ ಯಾವ ರೀತಿಯ ಸ್ಥಾನಮಾನ ನೀಡಲಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಉದ್ಯೋಗ, ರಾಜಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕಾದ ಅಗತ್ಯವಿದೆ’ ಎಂದರು.

ಪ್ರೊ.ವಿಜಯನ್ ಇಮಾನ್ಯುಲ್, ಪ್ರೊ.ರಾಧಾ ಪದ್ಮನಾಭನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !