ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಶ್ರೀರಾಂಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ಎಸಗಿದ್ದ ವಿಘ್ನೇಶ್ (28) ಹಾಗೂ ಆತನಿಗೆ ನೆರವಾಗಿದ್ದ ಹರೀಶ್ (36) ಬಂಧಿತರು. ಕೃತ್ಯದ ಬಳಿಕ ಆರೋಪಿ ತಪ್ಪಿಸಿಕೊಳ್ಳಲು ಹರೀಶ್ ನೆರವಾಗಿದ್ದ ಎಂದು ಪೊಲೀಸರು ಹೇಳಿದರು.

ಶ್ರೀರಾಂಪುರ ಸಮೀಪದ ಸ್ವತಂತ್ರಪಾಳ್ಯ ನಿವಾಸಿ ಯಾಮಿನಿ ಪ್ರಿಯಾ (20) ಅವರನ್ನು ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು. ಆರೋಪಿಗಳ ಬಂಧನಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಶ್ರೀರಾಂಪುರ ಬಳಿಯ ಸ್ವತಂತ್ರಪಾಳ್ಯದ ವಿಘ್ನೇಶ್, ತನಗೆ ಪರಿಚಯವಿದ್ದ ಯಾಮಿನಿ ಪ್ರಿಯಾ ಅವರನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ವಿದ್ಯಾರ್ಥಿನಿ ನಿರಾಕರಿಸಿದ್ದರು. ಗುರುವಾರ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಅಡ್ಡಗಟ್ಟಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಚಾಕು ಖಾರದ ಪುಡಿ ತಂದಿದ್ದ

ಯಾಮಿನಿ ಪ್ರಿಯಾ ಅವರನ್ನು ಕೊಲೆ ಮಾಡಲು ವಿಘ್ನೇಶ್ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ. ಕೃತ್ಯಕ್ಕೆ ಬೇಕಾದ ಚಾಕು ಖಾರದ ಪುಡಿಯನ್ನು ಜತೆಯಲ್ಲೇ ತಂದಿದ್ದ. ಕೊಲೆಗೂ ಮುನ್ನವೇ ದ್ವಿಚಕ್ರ ವಾಹನದಲ್ಲಿ ಮಲ್ಲೇಶ್ವರದ ಮಂತ್ರಿ ಮಾಲ್ ಬಸ್ ನಿಲ್ದಾಣದ ಬಳಿ ಬಂದಿದ್ದ ವಿಘ್ನೇಶ್ ಮತ್ತು ಹರೀಶ್ ಯಾಮಿನಿಯ ಬರುವಿಕೆಗಾಗಿ ಕಾದಿದ್ದರು. ಬಿ.ಫಾರ್ಮಾ ಓದುತ್ತಿದ್ದ ಯಾಮಿನಿ ಕಾಲೇಜು ಮುಗಿಸಿಕೊಂಡು ಬನಶಂಕರಿ ಮೂರನೇ ಹಂತದಿಂದ ಬಿಎಂಟಿಸಿ ಬಸ್ನಲ್ಲಿ ಮಂತ್ರಿ ಮಾಲ್ನ ಬಳಿ ಬಂದು ರೈಲ್ವೆ ಹಳಿಯ ಪಕ್ಕದ ಕಾಲು ದಾರಿಯಲ್ಲಿ ಮನೆಯತ್ತ ನಡೆದು ಹೊರಟಿದ್ದರು. ಆಗ ಹಿಂಬಾಲಿಸಿಕೊಂಡು ಹೋಗಿ ಕೃತ್ಯ ಎಸಗಿದ್ದರು. ಕೃತ್ಯ ಎಸಗಿದ ರೈಲ್ವೆ ಹಳಿ ಪಕ್ಕದಲ್ಲೇ ಆರೋಪಿ ಮೊಬೈಲ್ ಎಸೆದು ಹೋಗಿದ್ದ. ಸೋಲದೇವನಹಳ್ಳಿ ಬಳಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಮಿಷನ್ ಯಾಮಿನಿ’

ವಾಟ್ಸ್ಆ್ಯಪ್ ಗ್ರೂಪ್ ಯಾಮಿನಿ ಅವರನ್ನು ಕೊಲೆ ಮಾಡಲು ವಿಘ್ನೇಶ್ ಪೂರ್ವಯೋಜಿತ ಸಂಚು ರೂಪಿಸಿದ್ದ. ಹಲವು ತಿಂಗಳುಗಳಿಂದ ಚಲನವಲನದ ಮೇಲೆ ಕಣ್ಣಿಟ್ಟಿದ್ದ ವಿಘ್ನೇಶ್ ಕೊಲೆ ಉದ್ದೇಶಕ್ಕಾಗಿಯೇ ‘ಮಿಷನ್ ಯಾಮಿನಿ ಪ್ರಿಯಾ’ ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚಿಸಿದ್ದ. ಯಾಮಿನಿ ಎಲ್ಲಿಗೆ ಹೋಗುತ್ತಾರೆ ಯಾರ ಜತೆ ಮಾತನಾಡುತ್ತಾರೆ ಎಂದು ಮಾಹಿತಿ ಕಲೆಹಾಕುವುದಕ್ಕಾಗಿಯೇ ಗ್ರೂಪ್ ರಚಿಸಿಕೊಂಡಿದ್ದ. ಅಲ್ಲದೇ ನಾಲ್ಕು ಮಂದಿಯನ್ನು ಆ ಗ್ರೂಪ್ಗೆ ಸೇರಿಸಿದ್ದ. ಹರೀಶ್ ಹಾಗೂ ಇತರರು ಯಾಮಿನಿ ಅವರ ಚಲನವಲನದ ಬಗ್ಗೆ ಗ್ರೂಪ್ನಲ್ಲಿ ನಿರಂತರವಾಗಿ ಮಾಹಿತಿ ಹಂಚಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.