ಯಲಹಂಕ: ಶಾಲಾ ಕಾಂಪೌಂಡ್ ಸ್ವಚ್ಛತೆ, ಎಲ್ಕೆಜಿ ಕೊಠಡಿ ದುರಸ್ತಿ, ಅತಿಥಿ ಶಿಕ್ಷಕರು ಬೇಕು, ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಒಳಾಂಗಣ ಕ್ರೀಡೆಗಳಿಗೆ ವ್ಯವಸ್ಥೆ ಕಲ್ಪಿಸಬೇಕು, ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸಬೇಕು, ಶಾಲೆಯ ಮುಂಭಾಗದ ಮುಖ್ಯ ರಸ್ತೆಯ ಪಾದಚಾರಿ ಮಾರ್ಗವನ್ನು ಸರಿಪಡಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮಕ್ಕಳು ಮನವಿ ಮಾಡಿದರು.

ರಾಜಾನುಕುಂಟೆ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಕ್ಕಳಿಂದ ಬೇಡಿಕೆಗಳ ಮಹಾಪೂರವೇ ಹರಿದುಬಂದಿತು.

ಮಕ್ಕಳ ಬೇಡಿಕೆಗಳನ್ನು ಆಲಿಸಿ ಪ್ರತಿಕ್ರಿಯಿಸಿದ ಪಿಡಿಒ ನಾಗರಾಜ್, ‘ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಅನುಕೂಲಕ್ಕಾಗಿ ಸ್ಮಾ ರ್ಟ್ ಕ್ಲಾಸ್ಗಳಿಗೆ ಪ್ರೊಜೆಕ್ಟರ್, ಟ್ರ್ಯಾಕ್ ಸೂಟ್, ಕ್ರೀಡಾ ಸಾಮಗ್ರಿ ಹಾಗೂ ಸಮವಸ್ತ್ರ ವಿತರಿಸಲಾಗಿದೆ. ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ ಹಾಗೂ ಕ್ರೀಡಾ ಕೂಟಗಳಲ್ಲಿ ಪಾಲ್ಗೊಂಡ ಮಕ್ಕಳಿಗೆ ಬಹುಮಾನ ವಿತರಿಸಲಾಗಿದೆ. ಅಲ್ಲದೆ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಿ, ತೆರೆದ ಜಿಮ್ ಸೇರಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ’ ಎಂದು ತಿಳಿಸಿದರು.

ಶಾಲಾ ಕಾಂಪೌಂಡ್ನೊಳಗೆ ಸ್ವಚ್ಛತೆ ಮಾಡುತ್ತಿದ್ದು, ಇದನ್ನು ಮುಂದುವರಿಸಲಾಗುವುದು. ಕೆಲವು ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲಾಗಿದ್ದು, ಇನ್ನುಳಿದ ಮಕ್ಕಳಿಗೂ ಅವಕಾಶ ಕಲ್ಪಿಸಲು ಪಟ್ಟಿ ಸಿದ್ಧಪಡಿಸಿಕೊಡಲು ಶಿಕ್ಷಕರಿಗೆ ತಿಳಿಸಲಾಗಿದೆ. ಅತಿಥಿ ಶಿಕ್ಷಕರನ್ನು ಪಂಚಾಯಿತಿ ವತಿಯಿಂದ ಒದಗಿಸಲು ಅವಕಾಶ ವಿಲ್ಲದ ಕಾರಣ, ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು. ಈಗಾಗಲೆ ಈಜು ತರಬೇತಿ ಪಡೆದು 25 ಕ್ರೀಡಾಪಟುಗಳು ಸಿದ್ಧರಾಗಿದ್ದು, ಈ ವರ್ಷವೂ ಆಸಕ್ತಿ ಇರುವವರ ಪಟ್ಟಿ ಸಿದ್ಧಪಡಿಸಿ ಸಲ್ಲಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ. ಮಕ್ಕಳ ಕಲಿಕೆ ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಸಹಕಾರ ನೀಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಲತಾ.ಡಿ.ಬಿ ಮಾತನಾಡಿ, ‘ಪೋಷಕರು ಹಾಗೂ ಶಿಕ್ಷಕರ ಬಳಿ ಮಕ್ಕಳು ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ವಿಶೇಷ ಸಭೆಗಳನ್ನು ಆಯೋಜಿಸುವುದರಿಂದ ಅವರು ಮುಕ್ತವಾಗಿ ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಹೇಳಿಕೊಳ್ಳಲು ಹಾಗೂ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಜಾತಮ್ಮ, ಅಂಬಿಕಾ ರಾಜೇಂದ್ರಕುಮಾರ್, ಎಸ್.ಜಿ.ನರಸಿಂಹಮೂರ್ತಿ, ಕೆ.ವೀರಣ್ಣ, ಎನ್.ಭವಾನಿ, ಸದಸ್ಯರಾದ ಬೈರಮ್ಮ ಮುನಿರಾಜು, ಎಂ.ಚಿಕ್ಕ ಣ್ಣ, ಎನ್.ಸಂತೋಷ್ಕುಮಾರ್, ಸುಜಾತ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಆಶಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.