ಬೆಂಗಳೂರು: ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ಇನ್ಸ್ಟಾಗ್ರಾಂ ಐ.ಡಿ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದ ಯುವಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯುವತಿಯ ತಾಯಿ ನೀಡಿದ ದೂರಿನ ಅನ್ವಯ ವಿನೋದ್ ಎಂಬಾತನನ್ನು ಬಂಧಿಸಲಾಗಿದೆ.

ಯುವತಿ ಕೆಲಸ ಮುಗಿಸಿಕೊಂಡು ಏಪ್ರಿಲ್ 29ರಂದು ರಾತ್ರಿ 10.30ರ ಸುಮಾರಿಗೆ ಟಿ.ದಾಸರಹಳ್ಳಿ ಬಳಿ ರಸ್ತೆಯಲ್ಲಿ ನಡೆದು ಮನೆಗೆ ತೆರಳುತ್ತಿದ್ದರು. ಆಗ ಯುವತಿಯನ್ನು ಅಡ್ಡಗಟ್ಟಿದ್ದ ವಿನೋದ್, ಆಕೆಯ ಇನ್ಸ್ಟಾಗ್ರಾಂ ಐ.ಡಿ ನೀಡುವಂತೆ ಒತ್ತಾಯಿಸಿದ್ದ ಎಂದು ಮೂಲಗಳು ತಿಳಿಸಿದೆ.

‘ಆತಂಕಗೊಂಡ ಯುವತಿ, ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆಗ ಆರೋಪಿ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ ಕಿರುಕುಳ ಕೊಟ್ಟಿದ್ದ. ಯುವತಿಯ ತಾಯಿ ಸ್ಥಳಕ್ಕೆ ಬಂದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ. ಬಳಿಕ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.