ಗುರುವಾರ , ಅಕ್ಟೋಬರ್ 17, 2019
22 °C
ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ

ಸಾವಿನಲ್ಲೂ ನಾಲ್ವರಿಗೆ ಆಸರೆಯಾದ ಯುವಕ

Published:
Updated:

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 34 ವರ್ಷದ ಯುವಕ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ನಾಲ್ವರಿಗೆ ಆಸರೆಯಾಗಿದ್ದಾರೆ.

ವೃತ್ತಿಯಲ್ಲಿ ವಾಹನ ಚಾಲಕರಾಗಿದ್ದ ದೀಪಕ್ ಎಡ್ವಿನ್ ಕಳೆದ ಸೆ.22ರಂದು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವಾಗ ನಾಯಿ ಎದುರಾದ ಪರಿಣಾಮ ಅಪಘಾತಕ್ಕೆ ಒಳಗಾಗಿದ್ದನು. ತಲೆಗೆ ತೀವ್ರವಾಗಿ ಗಾಯವಾದ ಪರಿಣಾಮ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸಿದ ಪರಿಣಾಮ ವೈದ್ಯರು ಮಿದುಳು ನಿಷ್ಕ್ರೀಯವಾಗಿರುವುದಾಗಿ ಘೋಷಿಸಿದರು. ಕುಟುಂಬದ ಸದಸ್ಯರಿಗೆ ಅಂಗಾಂಗ ದಾನದ ಮಹತ್ವ ತಿಳಿಸಿ, ಸಮ್ಮತಿ ಪಡೆದುಕೊಂಡರು.

ಯುವಕನ ಪಿತ್ತಜನಕಾಂಗವನ್ನು 60 ವರ್ಷದ ವ್ಯಕ್ತಿಗೆ, ಹೃದಯವನ್ನು 23 ವರ್ಷದ ಎಂಜಿನಿಯರ್‌ಗೆ ಹಾಗೂ ಒಂದು ಮೂತ್ರಪಿಂಡವನ್ನು 39 ವರ್ಷದ ಮಹಿಳೆಗೆ ಕಸಿ ಮಾಡಲಾಯಿತು. ಇನ್ನೊಂದು ಮೂತ್ರಪಿಂಡವನ್ನು ಬಿಜಿಎಸ್ ಆಸ್ಪತ್ರೆಗೆ ಸಾಗಿಸಲಾಯಿತು.

 

Post Comments (+)