ಬೆಂಗಳೂರು: ಅಲ್ಲಿ ರೊಬೋಟ್‌ಗಳು ಸ್ಪರ್ಧೆಗಿಳಿದಿದ್ದವು. ರೊಬೋಟ್‌ಗಳು ಕಸವನ್ನು ಹೆಕ್ಕಿ ರಾಶಿ ಹಾಕುವ ದೃಶ್ಯ, ಅವುಗಳ ಕಾದಾಟ ನೋಡುತ್ತಿದ್ದಂ
ತೆಯೇ ಅವುಗಳನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳಲ್ಲಿ ಏನೋ ಪುಳಕ.

ಈ ದೃಶ್ಯ ಕಂಡು ಬಂದದ್ದು ನಗರದ ಕ್ರೈಸ್ಟ್ ಜೂನಿಯರ್ ಕಾಲೇಜು ಆವರಣದಲ್ಲಿ. ಕ್ರೈಸ್ಟ್ ವಿಶ್ವವಿದ್ಯಾಲಯವು ಅಮೆರಿಕದ ಮಿಚಿಗನ್‌ನ ರೊಬೊ
ಫೆಸ್ಟ್ ಲಾರೆನ್ಸ್ ಟೆಕ್ನಾಲಾಜಿಕಲ್ ಯುನಿವರ್ಸಿಟಿಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ರೊಬೋಟ್ ಪ್ರದರ್ಶನ, ಸ್ಪರ್ಧೆ ಮತ್ತು ಸಮ್ಮೇಳನವನ್ನು ಶನಿವಾರ ಆಯೋಜಿಸಿತ್ತು.

ವಿದ್ಯಾರ್ಥಿಗಳ ಚಟುವಟಿಕೆ, ತಮಗೆ ವಹಿಸಿದ್ದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ನಿಟ್ಟಿನಲ್ಲಿ ಅವರು ತೋರಿಸುವ ಹಟ, ಅವರಲ್ಲಿದ್ದ ಗೆಲ್ಲುವ ಛಲ... ಒಂದು ವಿನೂತನ ಲೋಕವನ್ನೇ ಸೃಷ್ಟಿಸಿತ್ತು.

ರೊಬೋಟ್‌ಗಳ ಬ್ಯಾಟರಿ, ವಯರ್ ಸುಸ್ಥಿತಿಯಲ್ಲಿವೆಯೇ ಎಂದು ವಿದ್ಯಾರ್ಥಿಗಳು ಪದೇ ಪದೇ ಪರೀಕ್ಷಿಸುತ್ತಿದ್ದರು. ತಾವು ತಯಾರಿಸಿದ ರೊಬೋಟ್
ಗಳ ಬಗ್ಗೆ ಆತ್ಮವಿಶ್ವಾಸದಿಂದ ವಿವರಿಸುತ್ತಿದ್ದ ಪರಿ, ಅಲ್ಲಿ ನೆರೆದವರಿಗೆ ಖುಷಿನೀಡುತ್ತಿತ್ತು.

ರೊಬೋಟ್‌ಗಳಿಗಾಗಿ ಏರ್ಪಡಿಸಿದ್ದ ‘ಸುಮೊ ಕುಸ್ತಿ’ ಹಾಗೂ ‘ಸ್ವಚ್ಛ ಭಾರತ್’ ಸ್ಪರ್ಧೆಗಳು ಗಮನ ಸೆಳೆದವು. ರೊಬೋಟ್‌ಗಳು ಪರಸ್ಪರ ಹೊಡೆದಾಡು
ತ್ತಿದ್ದ ದೃಶ್ಯವನ್ನು ಪ್ರೇಕ್ಷಕರು ಕಣ್ಣೆವೆಯಿಕ್ಕದೇ ನೋಡಿದರು. ಸ್ವಚ್ಛ ಭಾರತ್ ಸ್ಪರ್ಧೆಯಲ್ಲಿ, ಬಿದ್ದಿರುವ ಕಸವನ್ನು ರೊಬೋಟ್‌ಗಳು ಹೆಕ್ಕಿ ಹಾಕಬೇಕಿತ್ತು.

ನೊವಾಟೆಕ್ ಕಂಪೆನಿ ಅಭಿವೃದ್ಧಿ ಪಡಿಸಿದ್ದ ರೊಬಾಟ್‌ಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಮಿರರ್ ರೊಬೋಟ್ ಪ್ರೇಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿತ್ತು. ಆಗಸದಲ್ಲಿ ಹಾರಿಕೊಂಡು ಅತಿಥಿಗಳಿಗೆ ಹೂವನ್ನು ಹಾಕಲು ಬಳಸುವ ಡ್ರೋಣ್ ರೊಬೋಟ್ ಕೂಡಾ ಪ್ರದರ್ಶನದಲ್ಲಿತ್ತು.

‘ಮಕ್ಕಳ ಉತ್ಸಾಹ ನೋಡಲು ಖುಷಿಯಾಗುತ್ತದೆ. ರೊಬಾಟ್‌ಗಳ ಬಗ್ಗೆ ಅವರು ವಹಿಸುವ ಕಾಳಜಿ ಮೆಚ್ಚುವಂಥಹದ್ದು. ತಂಡವಾಗಿ ಕೆಲಸ ಮಾಡುವ ಪ್ರವೃತ್ತಿಯನ್ನು ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ. ಅವರ ವ್ಯಕ್ತಿತ್ವ ವಿಕಸನವೂ ಆಗುತ್ತದೆ’ ಎಂದು ಪೋಷಕಿ ಸ್ಮಿತಾ ಅಭಿಪ್ರಾಯಪಟ್ಟರು.

‘ನಮ್ಮ ತಂಡದವರೆಲ್ಲ ಸೇರಿ ರೊಬೋಟ್ ಸಿದ್ಧಪಡಿಸಿದ್ದೇವೆ. ಇದನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಆದರೆ, ಅದಕ್ಕೆ ಸಮಯ ಸಾಕಾಗಲಿಲ್ಲ. ಸ್ಪರ್ಧೆಯಲ್ಲಿ ಗೆಲ್ಲುವ ಭರವಸೆ ಇದೆ’ ಎಂದು ಸರ್ಜಾಪುರದ ಇಂದೂಸ್ ಇಂಟರ್‌ನ್ಯಾಷನಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಯಶ್ ತಿಳಿಸಿದರು.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ 40ಕ್ಕೂ ಹೆಚ್ಚು ಶಾಲಾ–ಕಾಲೇಜುಗಳ 100ಕ್ಕೂ ಹೆಚ್ಚು ತಂಡಗಳು ಸ್ಪರ್ಧೆಯಲ್ಲಿ ಭಾಗ
ವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.