ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾದರಿ ಕೆರೆಯಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದ ನರಸೀಪುರ ಕೆರೆಯ ಜಾಗವನ್ನು ಕಬಳಿಸಲು ಭೂಗಳ್ಳರು ಮುಂದಾಗಿದ್ದಾರೆ.

ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿರುವ ನರಸೀಪುರ ಕೆರೆ ಅಭಿವೃದ್ಧಿಗೆ ಬಿಬಿಎಂಪಿ ಈವರೆಗೆ ₨ 1.68 ಕೋಟಿ ವ್ಯಯಿಸಿದೆ. ಆದರೆ, ಕೆರೆಯ ಒಂದು ಬದಿಯಲ್ಲಿ ಒತ್ತುವರಿ ಆರಂಭಿಸಿರುವ ಭೂಗಳ್ಳರು ಕೆರೆಯ ಜಾಗವನ್ನು ಕಬಳಿಸಲು ಬಿಬಿಎಂಪಿ ಅಧಿಕಾರಿಗಳ ಮೇಲೂ ಒತ್ತಡ ತರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವರ್ಷಗಳ ಹಿಂದೆ ಬಿಬಿಎಂಪಿಯು ಕೆರೆಯ ಅಭಿವೃದ್ಧಿ ಹೊಣೆ ವಹಿಸಿಕೊಂಡಾಗ ಕೆರೆ ಒತ್ತುವರಿಯಾಗಿ ಕಸ– ಕಳೆಯಿಂದ ತುಂಬಿತ್ತು. ಅಲ್ಲದೆ ಚರಂಡಿ ನೀರು ಕೆರೆಯನ್ನು ಸೇರುತ್ತಿತ್ತು. ಬಿಬಿಎಂಪಿ ಅಧಿಕಾರಿಗಳು ನಿರಂತರ ಪತ್ರವ್ಯವಹಾರ ನಡೆಸಿದ ಬಳಿಕ ಬೆಂಗಳೂರು ಉತ್ತರ ತಾಲ್ಲೂಕು (ಯಲಹಂಕ) ತಹಶೀಲ್ದಾರ್ ಅವರು ಭೂಮಾಪಕರ ಮೂಲಕ ಕೆರೆಯ ಸರ್ವೆ ಕಾರ್ಯ ನಡೆಸಿ ನಕ್ಷೆಯನ್ನು ಬಿಬಿಎಂಪಿಗೆ ಕಳಿಸಿದ್ದರು.

ನಕ್ಷೆಯ ಪ್ರಕಾರ ನರಸೀಪುರ ಸರ್ವೆ ನಂ.20ರಲ್ಲಿರುವ ಕೆರೆಯ ವಿಸ್ತೀರ್ಣ 15 ಎಕರೆ 30 ಗುಂಟೆ. ಆದರೆ, ಕೆರೆಯ ಬಳಿಯಿರುವ ಬಿಡಿಎ ಅನುಮೋದಿತ ಖಾಸಗಿ ಬಡಾವಣೆಗೆ ಹೊಂದಿಕೊಂಡಂತಿರುವ ಮೂರು ನಿವೇಶನಗಳು ಹಾಗೂ ದೇವಾಲಯವೊಂದರಿಂದ ಒಟ್ಟು 15 ಗುಂಟೆ ಕೆರೆಯ ಜಾಗ ಒತ್ತುವರಿಯಾಗಿದೆ. ನಿವೇಶನಗಳ ಮಾಲೀಕರು ಕೆರೆಯ ಜಾಗ ಒತ್ತುವರಿ ಮಾಡಿಕೊಂಡು ತಡೆಗೋಡೆ ನಿರ್ಮಿಸಿಕೊಂಡಿದ್ದಾರೆ.

ನಕ್ಷೆಯ ಆಧಾರದ ಮೇಲೆ ಬಿಬಿಎಂಪಿ ಅಧಿಕಾರಿಗಳು ದೇವಾಲಯದ ಒತ್ತುವರಿ ಹೊರತುಪಡಿಸಿ ನಿವೇಶನಗಳ ತಡೆಗೋಡೆಗಳನ್ನು ತೆರವುಗೊಳಿಸಿದ್ದರು. ಅಲ್ಲದೆ ಎರಡು ಹಂತಗಳ ಕೆರೆ ಅಭಿವೃದ್ಧಿ ಯೋಜನೆಯನ್ನು ರೂಪಿಸಿದ್ದರು.

ಯೋಜನೆಯ ಮೊದಲ ಹಂತದಲ್ಲಿ ಬಿಬಿಎಂಪಿ ಕೆರೆಯ ಸುತ್ತ ತಂತಿಬೇಲಿ ಹಾಕಿಸಿದೆ. ಜತೆಗೆ ಕೆರೆಯ ಹೂಳು ತೆಗೆಸಿ, ಚರಂಡಿ ನೀರು ಕೆರೆ ಸೇರದಂತೆ ಪ್ರತ್ಯೇಕ ಕಾಲುವೆ ನಿರ್ಮಿಸಲಾಗಿದೆ. ಕೆರೆಯ ಏರಿ ಹಾಗೂ ನಡಿಗೆ ಮಾರ್ಗವನ್ನು ಅಭಿವೃದ್ಧಿಪಡಿ ಸಲಾಗಿದೆ. ಎರಡನೇ ಹಂತದಲ್ಲಿ ಕೆರೆಗೆ ಹೊಂದಿ ಕೊಂಡಂತಿದ್ದ ಸರ್ಕಾರಿ ಜಾಗದಲ್ಲಿ ಉದ್ಯಾನ ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು.

ಈ ಮಧ್ಯೆ, ಕೆರೆ ಒತ್ತುವರಿ ಮಾಡಿಕೊಂಡಿದ್ದ ನಿವೇಶನಗಳ ಮಾಲೀಕರು ಕೆರೆ ಅಭಿವೃದ್ಧಿ ಯೋಜನೆಗೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಇತ್ತ ಹೊಸದಾಗಿ ಜಂಟಿ ಸರ್ವೆ ಕಾರ್ಯ ನಡೆಸಲು ಬೆಂಗಳೂರು ಉತ್ತರ ತಾಲ್ಲೂಕು (ಯಲಹಂಕ) ತಹಶೀಲ್ದಾರ್ ಇತ್ತೀಚೆಗೆ ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯ ಕೇಳಿದ್ದಾರೆ. ‘ಈಗಾಗಲೆ ಸರ್ವೆ ಕಾರ್ಯ ಮುಗಿದು ನಕ್ಷೆ ಸಿದ್ಧವಾಗಿರುವಾಗ ಹೊಸದಾಗಿ ಜಂಟಿ ಸರ್ವೆ ನಡೆಸುವ ಅಗತ್ಯವೇನಿದೆ’ ಎಂಬುದು ಬಿಬಿಎಂಪಿ ಅಧಿಕಾರಿಯೊಬ್ಬರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.