ಹೊಸಕೋಟೆ: ಪಟ್ಟಣದ ಟೌನ್ ಕೋ- ಆಪರೇಟಿವ್ ಬ್ಯಾಂಕ್ ತನ್ನ ವ್ಯವಹಾರದ ಜೊತೆಗೆ ಸದಸ್ಯರ ಹಿತ ಕಾಪಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಬ್ಯಾಂಕ್ನ ಉಪಾಧ್ಯಕ್ಷ ಎಂ.ರವಿ ಹೇಳಿದರು.

ಬ್ಯಾಂಕಿನ ಸದಸ್ಯರ 81 ಮಕ್ಕಳಿಗೆ ಶಿಕ್ಷಣ ಪ್ರೋತ್ಸಾಹ ನಿಧಿಯಡಿ 5.78 ಲಕ್ಷ ರೂಪಾಯಿಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು, ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರಕ್ಕಾಗಿ 2006ರಿಂದ ಇದುವರೆಗೆ 34.92 ಲಕ್ಷ ರೂಪಾಯಿಗಳನ್ನು 1009 ಮಕ್ಕಳಿಗೆ ವಿತರಿಸಲಾಗಿದೆ ಎಂದರು.

ಅಲ್ಲದೆ, ಸದಸ್ಯರ ಕ್ಷೇಮ ನಿಧಿ ಮೂಲಕ ಇದುವರೆಗೆ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಮಾರಕ ರೋಗಗಳ ನೆರವಿಗಾಗಿ 2,976 ಸದಸ್ಯರಿಗೆ 25.02 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ಆರ್.ಸೋಮಸುಂದರ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪಿ.ಚೌಡಪ್ಪ, ಎಚ್.ಎ. ನಟರಾಜ್, ಪಿ.ಎಸ್.ಮಂಜುನಾಥ್, ವ್ಯವಸ್ಥಾಪಕರಾದ ಟಿ.ಎಲ್. ದೇವೇಂದ್ರಪ್ರಸಾದ್, ಎಸ್.ಬಿ.ಪಾಟೀಲ ಉಪಸ್ಥಿತರಿದ್ದರು.

ನೇಮಕ:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ `ಮಾಹಿತಿ ಮತ್ತು ತಂತ್ರಜ್ಞಾನ~ ವಿಭಾಗದ ಕಾರ್ಯದರ್ಶಿಯಾಗಿ ತಾಲ್ಲೂಕಿನ ಕಣ್ಣೂರಹಳ್ಳಿಯ ಪಿ.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಭಾಗದ ಅಧ್ಯಕ್ಷ ಪಿ.ಎಸ್. ನಿರಂಜನರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.