ಬೆಂಗಳೂರು: ಭಾರತದಲ್ಲಿ ಸಂಗ್ರಹವಾಗುವ ಘನತ್ಯಾಜ್ಯದಿಂದ ಸಾಕಷ್ಟು ಮಿಥೆನಾಲ್ ಇಂಧನವನ್ನು ಉತ್ಪಾದಿಸಬಹುದು ಎಂದು ‘ಯೂನಿವರ್ಸಿಟಿ ಆಫ್ ಸದರನ್ ಕ್ಯಾಲಿಫೋರ್ನಿಯ’ದ ರಸಾಯನಸಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಿ.ಕೆ.ಸೂರ್ಯ ಪ್ರಕಾಶ್ ಅಭಿಪ್ರಾಯಪಟ್ಟರು.

ಬೆಂಗಳೂರು ವಿಜ್ಞಾನ ವೇದಿಕೆಯು ಇತ್ತೀಚೆಗೆ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬಿಯಾಂಡ್ ಆಯಿಲ್ ಅಂಡ್ ಗ್ಯಾಸ್: ಮಿಥೆನಾಲ್ ಎಕಾನಮಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಿಥೆನಾಲ್ ಹೆಚ್ಚಿನ ದಕ್ಷತೆಯ ನೈಸರ್ಗಿಕ ಅನಿಲ. ಹೆಚ್ಚು ಶಕ್ತಿಯನ್ನು ಉತ್ಪಾದಿಸುವ ಮಿಥೆನಾಲ್ ಕಡಿಮೆ ಪ್ರಮಾಣದ ಇಂಗಾಲದ ಡೈ ಆಕ್ಸೈಡ್‌ಅನ್ನು ಬಿಡುಗಡೆ ಮಾಡುತ್ತದೆ. ಭವಿಷ್ಯದ ಇಂಧನವಾಗಿ ಇದನ್ನು ಅಭಿವೃದ್ಧಿಪಡಿಸಬಹುದು’ ಎಂದರು.

‘ಮುಸುಕಿನ ಜೋಳದಿಂದ ಉತ್ತಮ ಸಾಂದ್ರತೆಯ ಮಿಥೆನಾಲ್ ಉತ್ಪಾದಿಸಬಹುದಾಗಿದೆ. ಆದರೆ ಭಾರತಂದಂತಹ ಹೆಚ್ಚಿನ ಜನಸಂಖ್ಯಾ ರಾಷ್ಟ್ರಗಳಲ್ಲಿ ಆಹಾರ ಧಾನ್ಯವನ್ನು ಇಂಧನವಾಗಿ ಬಳಸುವುದು ಉಚಿತವಲ್ಲ’ ಎಂದು ಹೇಳಿದರು.

ವೇದಿಕೆ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.