ಸೋಮವಾರ, ಅಕ್ಟೋಬರ್ 26, 2020
23 °C

ಬೀದರ್: ಸರ್ಕಾರಿ ಐಟಿಐಗೆ ಪರಿಣಿತರ ತಂಡ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಾಜ್ಯ ಸರ್ಕಾರ ಹಾಗೂ ಟಾಟಾ ಟೆಕ್ನಾಲಾಜಿ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸುವ ಯೋಜನೆ ಪ್ರಯುಕ್ತ ಪರಿಣಿತರ ತಂಡ ಬುಧವಾರ ಇಲ್ಲಿಯ ಸರ್ಕಾರಿ ಐಟಿಐಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಯಂತ್ರೋಪಕರಣ, ಐಟಿ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್, ಐದು ವರ್ಷಗಳ ಫಲಿತಾಂಶ, ಪ್ಲೆಸ್‍ಮೆಂಟ್ ದತ್ತಾಂಶ ಅವಲೋಕಿಸಿದರೆ ಬೀದರ್ ಐಟಿಐ ಸರ್ಕಾರಿ ಐಟಿಐಗಳಲ್ಲೇ ಮುಂಚೂಣಿಯಲ್ಲಿ ಇದೆ. ಉನ್ನತೀಕರಣಕ್ಕೆ ಶಿಫಾರಸು ಮಾಡಲು ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಟಾಟಾ ಟೆಕ್ನಾಲಾಜಿ ಹಿರಿಯ ಕಾರ್ಯನಿರ್ವಾಹಕ ಎಂಜಿನಿಯರ್ ಇಶಾನ್ ತ್ರಿಪಾಠಿ ಹೇಳಿದರು.

ಐಟಿಐ ತರಬೇತುದಾರರನ್ನು ಕೌಶಲ ಕುಶಲರ್ಮಿಗಳನ್ನಾಗಿಸಲು ಟಾಟಾ ಟೆಕ್ನಾಲಜಿ ವಿನೂತನ ಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಐಟಿಐ ಪ್ರಭಾರ ಪ್ರಾಚಾರ್ಯ ಶಿವಶಂಕರ ಟೋಕರೆ, ಔರಾದ್ ಐಟಿಐ ಪ್ರಾಚಾರ್ಯ ಪ್ರಶಾಂತ ಜ್ಯಾಂತಿಕರ್, ಆಡಳಿತ ಅಧಿಕಾರಿ ಪ್ರಕಾಶ ಜನವಾಡಕರ್ ಮಾತನಾಡಿದರು. ಬಾಬು ಪ್ರಭಾಜಿ ನಿರೂಪಿಸಿದರು. ಯುಸೂಫ್‍ಮಿಯಾ ಸ್ವಾಗತಿಸಿದರು. ಸುದರ್ಶನಕುಮಾರ ಮಂಗಲಗಿಕರ್ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.