ಶುಕ್ರವಾರ, ಮಾರ್ಚ್ 5, 2021
30 °C

ಬೀದರ್‌ನಲ್ಲಿ ಏರ್ ಶೋ: ಸಚಿವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೀದರ್‌ನಲ್ಲಿ ಏರ್ ಶೋ ನಡೆಸುವ ಭರವಸೆ ನೀಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಅವರನ್ನು ಭೇಟಿಯಾಗಿ ತಾವು ಮಾಡಿದ ಮನವಿಗೆ ಸ್ಪಂದಿಸಿ ಸಂಬಂಧಪಟ್ಟವರಿಗೆ ಈ ಕುರಿತು ನಿರ್ದೇಶನ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬೀದರ್ ವಾಯುಪಡೆ ಕೇಂದ್ರವು ದೇಶದ ಎರಡನೇ ಅತಿದೊಡ್ಡ ತರಬೇತಿ ಕೇಂದ್ರವಾಗಿದೆ. 1963 ರಿಂದಲೂ ಐಎಎಫ್‍ನ ಉದಯೋನ್ಮುಖ ಪೈಲಟ್‍ಗಳಿಗೆ ತರಬೇತಿ ನೀಡುತ್ತಿದೆ. 2007, 2009, 2010 ರಲ್ಲಿ ವೈಮಾನಿಕ ಪ್ರದರ್ಶನಗಳು ನಡೆದಿವೆ. 2019 ರಲ್ಲಿ ಕಾರ್ಗಿಲ್ ಯುದ್ಧದ 20ನೇ ವರ್ಷಾಚರಣೆ ಪ್ರಯುಕ್ತ ಒಂದು ವಾರ ಸೂರ್ಯಕಿರಣ ಹಾಗೂ ಮಿರಾಜ್ ಯುದ್ಧ ವಿಮಾನಗಳ ಪ್ರದರ್ಶನದ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗಿದೆ ಎಂದು ಸಚಿವರ ಗಮನ ಸೆಳೆಯಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.