ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್: ಅಂಬೇಡ್ಕರ್‌ ನಿಗಮದಿಂದ ಬೈಕ್‌ ವಿತರಣೆ

Published 29 ಜೂನ್ 2024, 4:17 IST
Last Updated 29 ಜೂನ್ 2024, 4:17 IST
ಅಕ್ಷರ ಗಾತ್ರ

ಔರಾದ್: ಡಾ.ಬಿ.ಆರ್. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಒಟ್ಟು 26 ಯುವಕರಿಗೆ ಗುರುವಾರ ಬೈಕ್‌ ವಿತರಿಸಲಾಯಿತು.

ಶಾಸಕ ಪ್ರಭು ಚವಾಣ್‌ ಅವರು ಬೈಕ್‌ ವಿತರಿಸಿ ಸರ್ಕಾರ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಬೈಕ್‌ ಖರೀದಿಗೆ ಸಹಾಯಧನ ನೀಡಿದೆ. ಬೈಕ್‌ ಪಡೆದ ಯುವಕರು ತಮ್ಮ ಕುಟುಂಬದ ಆರ್ಥಿಕ ನೆರವಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

’ಬೈಕ್‌ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಉಪಯೋಗಿಸಬೇಕು. ಸಣ್ಣ ಮಕ್ಕಳಿಗೆ ಬೈಕ್‌ ಕೊಡಬಾರದು‘ ಎಂದು ಅಧಿಕಾರಿಗಳು ತಿಳಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಭಿವೃಧಿ ಅಧಿಕಾರಿ ರಾಘವೇಂದ್ರ ರಾಠೋಡ್, ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಸಂತೋಷ ಪೋಕಲವಾರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT