ಕೊಡಗಿನ ಜಾನುವಾರುಗಳಿಗೆ ಪಶು ವೈದ್ಯರ ಸಹಾಯಹಸ್ತ

7

ಕೊಡಗಿನ ಜಾನುವಾರುಗಳಿಗೆ ಪಶು ವೈದ್ಯರ ಸಹಾಯಹಸ್ತ

Published:
Updated:
Deccan Herald

ಬೀದರ್: ಇಲ್ಲಿಯ ಪಶು ವೈದ್ಯರು ನೆರೆ ಪೀಡಿತ ಕೊಡಗು ಜಿಲ್ಲೆಯ ಜಾನುವಾರುಗಳಿಗೆ ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕರ್ನಾಟಕ ಪಶು ವೈದ್ಯಕೀಯ ಸಂಘದ ರಾಜ್ಯ ಘಟಕದ ವತಿಯಿಂದ 22.5 ಕ್ವಿಂಟಲ್ ಹಾಗೂ ಬೀದರ್ ಜಿಲ್ಲಾ ಘಟಕದ ವತಿಯಿಂದ 7.5 ಕ್ವಿಂಟಲ್ ಪಶು ಆಹಾರ ಹಾಗೂ ಲವಣ ಮಿಶ್ರಣ ಜೀಪ್‌ನಲ್ಲಿ ಕೊಡಗಿಗೆ ಕಳುಹಿಸಿದ್ದಾರೆ.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಶಿವಶರಣಪ್ಪ ಯಲಗೂಡ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಪ್ರಧಾನ ಕಾರ್ಯದರ್ಶಿ ಡಾ. ನೀಲಕಂಠ ಚನಶೆಟ್ಟಿ, ಖಜಾಂಚಿ ಗಣಾಧೀಶ್ವರ ಹಿರೇಮಠ, ಡಾ. ಮಹಿಪಾಲ್‌ಸಿಂಗ್ ಠಾಕೂರ್, ಡಾ. ಸೋಮಶೇಖರ, ಪಶು ಪಾಲನೆ ಹಾಗೂ ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ರವಿ ಭೂರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !