ಸೋಮವಾರ, ಏಪ್ರಿಲ್ 12, 2021
31 °C

ಮನ್ನಳ್ಳಿ ಕೆರೆಗೆ ಖೇಣಿ ಬಾಗಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮನ್ನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಮನ್ನಳ್ಳಿ ಕೆರೆಗೆ ಮಾಜಿ ಶಾಸಕ ಅಶೋಕ ಖೇಣಿ ಬಾಗಿನ ಅರ್ಪಿಸಿದರು.

ಮಳೆ ಇಲ್ಲದ ಕಾರಣ ಹಿಂದೆ ಕೆರೆಯಲ್ಲಿ ನೀರು ಇರಲಿಲ್ಲ. ಈ ವರ್ಷ ಉತ್ತಮ ಮಳೆಯಾದ ಪ್ರಯುಕ್ತ ಕೆರೆ ತುಂಬಿರುವುದು ಸಂತಸ ಉಂಟು ಮಾಡಿದೆ. ಶಾಸಕನಾಗಿದ್ದ ಅವಧಿಯಲ್ಲಿ ಕೆರೆ ಅಭಿವೃದ್ಧಿಗೆ ₹1 ಕೋಟಿ ಹಾಗೂ ಬಸವ ಮಂಟಪಕ್ಕೆ ₹13 ಲಕ್ಷ ಅನುದಾನ ಒದಗಿಸಿದ್ದೆ ಎಂದು ತಿಳಿಸಿದರು.

ಗ್ರಾಮದ ಲಿಂಗಾಯತ ಭವನ ಹಾಗೂ ಬಸವ ಮಂಟಪಕ್ಕೆ ಭೇಟಿ ಕೊಟ್ಟರು.

ಕಾಂಗ್ರೆಸ್ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ ಮಡಕಿ, ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಮುಖಂಡರಾದ ಕರೀಂಸಾಬ, ರಾಜಕುಮಾರ ಮಡಕಿ, ವಿಶ್ವನಾಥ ಇದಲಾಯಿ, ರಾಜಕುಮಾರ ಚೊಲ್ಲಾ, ಧನರಾಜ ಮೂಲಗೆ, ದೇವೇಂದ್ರ ನೂರೊದ್ದೀನ್, ಲೋಕೇಶ ಕನಶೆಟ್ಟಿ, ಶಿವಕುಮಾರ ಕುತ್ತಾಬಾದ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು