ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲೆಡೆ ಬಸವ ಜಯಂತಿ ಸಂಭ್ರಮ

ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.
Last Updated 15 ಮೇ 2021, 3:51 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಭೀತಿಯ ನಡುವೆಯೂ ಜಿಲ್ಲೆಯಲ್ಲಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಕಾರ್ಯಕ್ರಮ ಸರಳವಾಗಿ ನಡೆಯಿತು.

ಶಾಸಕ ರಹೀಂಖಾನ್ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಜನಪ್ರತಿನಿಧಿಗಳು, ಲಿಂಗಾಯತ ಸಮಾಜದ ಗಣ್ಯರು, ಸಮಿತಿಯ ಪದಾಧಿಕಾರಿಗಳು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು.

ಸಂಸದ ಭಗವಂತ ಖೂಬಾ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿಗಳಾದ ಗರಿಮಾ ಪನ್ವಾರ್, ಭುವನೇಶ ಪಾಟೀಲ, ಬಸವ ಜಯಂತಿ ಉತ್ಸವ ಸಮಿತಿಯ ಶಿವಶರಣಪ್ಪ ವಾಲಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಶಕುಂತಲಾ ವಾಲಿ, ಆನಂದ ದೇವಪ್ಪ, ಡಾ. ರಜನೀಶ ವಾಲಿ, ಬಸವರಾಜ ಪಾಟೀಲ ಹಾರೂರಗೇರಿ, ಆದೀಶ್ ವಾಲಿ ಮೊದಲಾದವರು ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಕಚೇರಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿ ಗೌರವಿಸಿದರು. ಅಧಿಕಾರಿಗಳು, ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

ಜಿಲ್ಲೆಯ ಅನೇಕ ಗ್ರಾಮಗಳ ಬಸವೇಶ್ವರ ವೃತ್ತಗಳಲ್ಲಿ ಮಾಸ್ಕ್ ಧರಿಸಿ, ಸುರಕ್ಷಿತ ಅಂತರ ಕಾಯ್ದುಕೊಂಡು ಬಸವ ಜಯಂತಿ ಆಚರಣೆ ಮಾಡಲಾಯಿತು.

ಮನೆಗಳಲ್ಲೇ ಆಚರಣೆ: ಕೋವಿಡ್ ಕಾರಣ ಬಸವ ಜಯಂತಿಯನ್ನು ಮನೆಯಲ್ಲೇ ಆಚರಿಸಬೇಕು ಎಂದು ಮಠಾಧೀಶರು, ಸಮಾಜದ ಗಣ್ಯರು ಮನವಿ ಮಾಡಿದ್ದರು. ಹೀಗಾಗಿ ಬಹುತೇಕರು ಮನೆಗಳಲ್ಲಿ ಬಸವ ಜಯಂತಿ ಆಚರಿಸಿದರು.

ಮನೆ ಮುಂದೆ ರಂಗೋಲಿ ಹಾಕಿ, ಮಾಳಿಗೆ ಮೇಲೆ ಷಟ್‍ಸ್ಥಲ ಧ್ವಜ ಹಾರಿಸಿ, ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಾರ್ಥನೆ, ವಚನ ಪಠಣದೊಂದಿಗೆ ಬಸವ ಜಯಂತಿ ಆಚರಿಸಿದರು. ಕೋವಿಡ್‍ನಿಂದ ಮನುಕುಲವನ್ನು ರಕ್ಷಿಸುವಂತೆ ಬಸವಣ್ಣನವರಲ್ಲಿ ಪ್ರಾರ್ಥಿಸಿದರು.

ಬಸವೇಶ್ವರ ವೃತ್ತ: ನಗರದ ರಾಂಪುರೆ ಕಾಲೊನಿಯ ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಆರ್‌ಇ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಪಾಟೀಲ ಅಷ್ಟೂರ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿದರು.

ಕೆಆರ್‌ಇ ಸಂಸ್ಥೆ ವತಿಯಿಂದ ₹ 3 ಲಕ್ಷ ವೆಚ್ಚದಲ್ಲಿ ಬಸವೇಶ್ವರ ವೃತ್ತ ನವೀಕರಣ ಮಾಡಲಾಗುತ್ತಿದೆ. ಸಂಸ್ಥೆಯ ಭೂಮಿಯಲ್ಲಿ ಸಾರ್ವಜನಿಕರಿಗೆ ಮುಖ್ಯ ರಸ್ತೆಗೆ ಬರಲು ಮೂರು ಕಡೆ ದಾರಿ ಕೊಡಲಾಗಿದೆ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ನಗರಸಭೆ ಸದಸ್ಯರಾದ ರಾಜರಾಮ ಚಿಟ್ಟಾ, ಶಶಿಧರ ಹೊಸಳ್ಳಿ, ಮಾಜಿ ಸದಸ್ಯ ಧನರಾಜ ಹಂಗರಗಿ, ಶಿವಶರಣಪ್ಪ ವಾಲಿ, ಡಾ. ಬಸವರಾಜ ಬ್ಲಲೂರ ಇದ್ದರು. ಪ್ರೊ. ಹಾವಗಿರಾವ್ ಮೈಲಾರೆ ನಿರೂಪಿಸಿದರು. ಬಾಬುರಾವ್ ದಾನಿ ವಂದಿಸಿದರು.

ಕರ್ನಾಟಕ ಕಾಲೇಜು: ನಗರದ ಕರ್ನಾಟಕ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಉಪನ್ಯಾಸಕ ಸಚಿನ್ ವಿಶ್ವಕರ್ಮ, ಅಧೀಕ್ಷಕ ಮಲ್ಲಿಕಾರ್ಜುನ ರಾಸೂರ, ವೀರಶೆಟ್ಟಿ ಪಾಟೀಲ ಇದ್ದರು.

ಕಲ್ಯಾಣನಗರ: ನೌಬಾದ್‍ನ ಕಲ್ಯಾಣ ನಗರದ ವೃತ್ತದಲ್ಲಿ ಬಸವ ಜಯಂತಿ ಆಚರಿಸಲಾಯಿತು.

ರಮೇಶ ಚಿದ್ರಿ, ಶಿವರಾಜ ರಟಕಲೆ, ಸಂಗಮೇಶ ಎಚ್, ಬಸವರಾಜ ಬಿರಾದಾರ, ರಾಹುಲ್ ಬಿರಾದಾರ, ವೈಜಿನಾಥ ಬಾವಗೆ, ಬಾಬುರಾವ್ ಗಂದಗೆ, ವೀರಶೆಟ್ಟಿ ಚನಶೆಟ್ಟಿ, ಸಾಹಿಲ್ ಚಿದ್ರಿ ಇದ್ದರು.

ಬಾವಗಿ: ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಸರಳವಾಗಿ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಸಂಗಮೇಶ ಶಾಂತವೀರ ಹಜ್ಜರಗಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನಮಲ್ಲಪ್ಪ ಹಜ್ಜರಗಿ, ಭದ್ರೇಶ್ವರ ಮಠದ ಶಿವಕುಮಾರ ಸ್ವಾಮಿ, ಮಾರುತಿ ಮಸಲು, ನೀರಡಿ ಝರೆಪ್ಪ, ಗಿರೀಶ್, ಶಿವಕುಮಾರ, ರೇವಣಪ್ಪ ಭದ್ರಣ್ಣ, ರಾಜಕುಮಾರ ಮಡಿವಾಳ, ಪ್ರಭು ಕಾರಕನಳ್ಳಿ, ಜಗನ್ನಾಥ ಚಿದ್ರಿ, ರಾಜಕುಮಾರ ಪಟೀಲ ಇದ್ದರು.

ಹಾಲಹಳ್ಳಿ: ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಣ್ಣಯ್ಯ ಸ್ವಾಮಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಜಗನ್ನಾಥ ಲಿಂಗಬಾ ಗಶೆಟ್ಟಿ, ಓಂಕಾರ ಲಿಂಗಬಾಗಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT