ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಜಯಂತಿ: ನಗರದಲ್ಲಿ ಬೈಕ್ ರ್‍ಯಾಲಿ

ಅದ್ದೂರಿ ಮೆರವಣಿಗೆಯಲ್ಲಿ ಅನುರಣಿಸಿದ ಬಸವ ಜಯಘೋಷ
Last Updated 1 ಮೇ 2022, 15:08 IST
ಅಕ್ಷರ ಗಾತ್ರ

ಬೀದರ್: ಬಸವ ಜಯಂತಿ ಉತ್ಸವ ಸಮಿತಿಯು ಬಸವ ಜಯಂತಿ ಅಂಗವಾಗಿ ನಗರದಲ್ಲಿ ಭಾನುವಾರ 2022 ಬೈಕ್‍ಗಳ ಮಹಾ ರ್‍ಯಾಲಿ ನಡೆಯಿತು.

ಮಹಿಳೆಯರು ತಲೆಗೆ ಪೇಟಾ, ಯುವಕರು ಕೊರಳಲ್ಲಿ ಕೇಸರಿ ಶಲ್ಯ, ಬೈಕ್‍ಗೆ ಷಟ್‍ಸ್ಥಲ ಧ್ವಜ ಕಟ್ಟಿಕೊಂಡು ವಿಶ್ವ ಗುರು ಬಸವಣ್ಣನವರಿಗೆ ಜಯವಾಗಲಿ, ಬಸವ ಜಯಂತಿ ಉತ್ಸವಕ್ಕೆ ಜಯವಾಗಲಿ ಹಾಗೂ ಭಾರತ ದೇಶ ಜಯ ಬಸವೇಶ ಎನ್ನುವ ಘೋಷಣೆಗಳನ್ನು ಮೊಳಗಿಸಿದರು.

ಗುಂಪಾದ ಸಿದ್ಧಾರೂಢ ಮಠದಿಂದ ಹೊರಟ ರ್‍ಯಾಲಿ ಪ್ರಮುಖ ರಸ್ತೆಗಳ ಮೂಲಕ ಪಾಪನಾಶ ಮಂದಿರ ಪರಿಸರಕ್ಕೆ ತಲುಪಿ ಸಮಾರೋಪಗೊಂಡಿತು.

ಇದಕ್ಕೂ ಮುನ್ನ ಸಿದ್ಧಾರೂಢ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರು ಷಟ್‍ಸ್ಥಲ ಧ್ವಜ ತೋರಿಸುವ ಮೂಲಕ ರ್‍ಯಾಲಿಗೆ ಚಾಲನೆ ನೀಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ಬಸವ ಉತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಬೈಕ್ ರ್‍ಯಾಲಿ ಸಮಿತಿಯ ಅಧ್ಯಕ್ಷ ಅರುಣ ಕುಮಾರ ಹೋತಪೇಟ್ ಅಧ್ಯಕ್ಷತೆ ವಹಿಸಿದ್ದರು.

ಬಸವ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಶೈಲೇಂದ್ರ ಬಲ್ದಾಳೆ, ಶಿವಶರಣಪ್ಪ ವಾಲಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಬುಡಾ ಅಧ್ಯಕ್ಷ ಬಾಬು ವಾಲಿ, ಕೋಶಾಧ್ಯಕ್ಷ ಡಾ.ರಜಿನೀಶ್ ವಾಲಿ, ಚಂದ್ರಶೇಖರ ಪಾಟೀಲ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ, ಮೆರವಣಿಗೆ ಸಮಿತಿ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಗೌರವಾಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪೂರ, ದೀಪಕ ವಾಲಿ, ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಶರಣಪ್ಪ ಮಿಠಾರೆ, ರಮೇಶ ಪಾಟೀಲ ಸೋಲಪುರ, ಮಹಿಳಾ ಸಮಿತಿ ಅಧ್ಯಕ್ಷ ಶಕುಂತಲಾ ಬೆಲ್ದಾಳೆ, ಸಂಗೊಳ್ಳಿ ರಾಯಣ್ಣ ಘಟಕದ ಅಧ್ಯಕ್ಷ ಬಾಬುರಾವ್ ಮಲ್ಕಾಪುರೆ, ಪ್ರಾಚಾರ ಸಮಿತಿ ಅಧ್ಯಕ್ಷ ಅಶೋಕ ಕರಂಜೆ, ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ, ಈಶ್ವರ ಸಿಂಗ್ ಠಾಕೂರ, ಜಗದೀಶ ಖೂಬಾ, ಹನ್ನುಸಿಂಗ್ ಠಾಕೂರ, ನಾಗೇಶ ಪಾಟೀಲ ಮರೂರ, ಶೇಖರ ಕೊಳಾರ ಪಾಲ್ಗೊಂಡಿದ್ದರು. ಸುರೇಶಕುಮಾರ ಸ್ವಾಮಿ ಕಾರ್ಯಕ್ರಮ ನಿರುಪಿಸಿದರು.

ಎಸ್ಕಾರ್ಟ್ ವಾಹನ ಬಸವಣ್ಣನವರ ಭಾವ ಚಿತ್ರ, ಷಟ್‍ಸ್ಥಲ ಧ್ವಜ ಹಾಗೂ ಹೂವಿನ ಅಲಂಕಾರದೊಂದಿಗೆ ಮುಂದೆ ಸಾಗುತ್ತಿತ್ತು, ಅದರ ಹಿಂದೆ ಸುಮಾರು 3 ಸಾವಿರಕ್ಕಿಂತ ಹೆಚ್ಚಿನ ಶರಣ ಶರಣೆಯರು ವೇಷ ಭೂಷಣದೊಂದಿಗೆ ಮುಂದೆ ಸಾಗುತ್ತಿದ್ದರು. ರ್‍ಯಾಲಿ ಮದ್ಯದಲ್ಲಿ ವಿ.ಕೆ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್, ಹಾರೂರಗೇರಿ ಕ್ರಾಸ್ ಹತ್ತಿರ ಹಾರೂರಗೇರಿ ಬಸವ ಸಮಿತಿಯ ಉಪಾಧ್ಯಕ್ಷ ಬಸವರಾಜ ಮಲ್ಲೆರೆ,ಅಶೋಕ ಹೊಕ್ರಾಣೆ ಅವರಿಂದ ಹಾಗೂ ಬಸ್ ನಿಲ್ದಾಣ ಹತ್ತಿರ ರಸ್ತೆ ಸಾರಿಗೆ ಸಿಬ್ಬಂದಿಯವರಿಂದ ಹಾಗೂ ನೌಬಾದನಲ್ಲಿ ನಗರ ಸಭೆ ಸಧಸ್ಯರಾದ ವೀರಶೆಟ್ಟಿ ಪಾಟೀಲ, ಖ್ಯಾತ ಉದ್ಯಮಿ ಮಹೇಶ್ ಮೈಲಾರೆ ಅವರಿಂದ ಪುಷ್ಷವೃಷ್ಟಿ ನೆಡಿಸಿಕೊಟ್ಟರು.

ಬೈಕ್ ರ್‍ಯಾಲಿಯಲ್ಲಿ ಹಿಂದು ಬ್ರಿಗೇಡಿನ ಹನುಮಪಾಜಿ ಗೆಳೆಯರ ಬಳಗ, ಬಜರಂಗ ದಳದ ಹುನುಮಂತ ಮಲ್ಕಾಪುರೆ, ಶ್ರೀರಾಮ ಸೇನೆ ಹಾಗೂ ನಗರಸಭೆ ಸದಸ್ಯ ರಾಜರಾಮ ಚಿಟ್ಟಾ, ಸುರೇಶ ಹಳೆಯಂಬರ, ಆದೀಶ ವಾಲಿ ವಿಕ್ರಮ ಮುದಾಳೆ, ಸೋಮಶೇಖರ್ ಟಿಳ್ಳೆಕರ್, ಗುರುನಾಥ ರಾಜಗೀರಾ, ರಾಜಶೇಖರ ಮಂಗಲಗಿ, ಬಸವ ಕಿರಣ, ನಿರಂಹಕಾರ ತುಪ್ಪಾದ, ರವಿ ಪಾಪಡೆ, ಹನುಮಂತ ಟಿಂಗಳಿ, ಪ್ರಕಾಶ್ ಸಾವಳಗಿ, ನಂದಕುಮಾರ ಪಾಟೀಲ, ಬಸವರಾಜ ಬಿರಾದರ, ವಿವೇಕ ಪಟ್ನೆ, ವಿಜಯಕುಮಾರ ಆನಂದೆ, ಅಂಬರೀಶ್ ಬಿರಾದರ, ಹನುಮಂತ ಬುಳ್ಳಾ, ಉಮಾಕಾಂತ ಮೀಸೆ, ಒಂಕಾರ್ ಕುಂಚಿಗೆ, ನಿತೀನ ನವಲಕೇಲೆ, ಧನರಾಜ ಹಂಗರಗಿ, ವಿಶ್ವನಾಥ ಮಡಕಿ, ಅಮೀತ ಕೋಟೆ, ಬಸವರಾಜ ಹಿಲಾಲಪುರ, ಬಾಬುರಾವ ಸದಲಾಪುರೆ, ರಾಜಕುಮಾರ ಕಮಠಾಣೆ, ಸಂಜೀವಕಮಾರ ಪಾಟೀಲ ಭಾಗವಹಿಸಿದರು.

ದೀಪಕ ವಾಲಿ ಫೌಂಡೇಶನ್ ವತಿಯಿಂದ ಯುವನಾಯಕರಾದ ವಿವೇಕ ವಾಲಿ ಯವರಿಂದ ತಣ್ಣನೆಯ ಮಜ್ಜಿಗೆ ವ್ಯವಸ್ಥೆ ಮಾಡಿದರು.

ಪಾಪನಾಶದಲ್ಲಿ ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ ಎಲ್ಲರಿಗೂದಭರತ ಶೆಟಗಾರ ಪ್ರಸಾದ ವ್ಯವಸ್ಥೆ ಮಾಡಿದರು.

ರ್‍ಯಾಲಿಯಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಶರಣ ಶರಣೆಯರು ಭಾಗವಹಿಸಿ ಐತಿಹಾಸಿಕವಾಗಿ ಯಶಸ್ವಿಗೊಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT