ಪ್ರಭು ಚವಾಣ್ ವಿರುದ್ಧ ಕ್ರಮ ಜರುಗಿಸಲಿ’
‘ಲಂಬಾಣಿ ಜನಾಂಗದವರು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಬರುತ್ತಾರೆ. ಮೂಲತಃ ಅಲ್ಲಿ ಹುಟ್ಟಿರುವ ಔರಾದ್ ಶಾಸಕ ಪ್ರಭು ಚವಾಣ್ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ನಾಲ್ಕು ಸಲ ಶಾಸಕರಾಗಿದ್ದಾರೆ. ನ್ಯಾಯಾಲಯ ಕೂಡ ಇವರ ವಿಚಾರದಲ್ಲಿ ಈಗಾಗಲೇ ತೀರ್ಪು ನೀಡಿ ಕ್ರಮ ಕೈಗೊಳ್ಳುವ ಅಧಿಕಾರವನ್ನು ಅಧಿಕಾರಿಗಳಿಗೆ ಕೊಟ್ಟಿದೆ. ಕೂಡಲೇ ಅಧಿಕಾರಿಗಳು ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಮುಖಂಡ ವಿಠ್ಠಲದಾಸ ಪ್ಯಾಗೆ ಒತ್ತಾಯಿಸಿದರು.