ಆಂಬ್ಯುಲೆನ್ಸ್ ಇಲ್ಲದೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಬಾಣಂತಿ ಸಾವು
ಬೇಮಳಖೇಡಾ ಗ್ರಾಮದ ನಿವಾಸಿ ಮಹಾನಂದ ವೀರಪ್ಪ ಡಾಲಿ ಎಂಬುವವರು ಜೂನ್ 2ರಂದು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಹೆರಿಗೆ ಆಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ರಕ್ತಸ್ರಾವ ಹೆಚ್ಚಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ಸಹ ರಕ್ತಸ್ರಾವ ನಿಲ್ಲಲಿಲ್ಲ. ಬೀದರ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಸಿಬ್ಬಂದಿಗೆ ಅಂಬುಲೆನ್ಸ್ ಕೇಳಿದರೆ ಇಲ್ಲ ಎಂದರು. ನಂತರ ಅನಿವಾರ್ಯವಾಗಿ ಖಾಸಗಿ ವಾಹನದಲ್ಲಿ ಕರೆದುಕೊಂಡು ಬೀದರ್ ನಗರಕ್ಕೆ ಹೋಗುವ ದಾರಿ ಮಧ್ಯೆದಲ್ಲಿ ಬಾಣಂತಿ ಮಹಾನಂದ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಇದ್ದಿದ್ದರೆ ಶೀಘ್ರ ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದೆವು. ಜೀವ ಉಳಿಯುತ್ತಿತ್ತು. ಚಿಕಿತ್ಸೆಗಾಗಿ ನಮ್ಮಂತಹ ಬಡವರೇ ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬರುತ್ತೇವೆ. ಆದರೆ ಇಲ್ಲಿ ಸೌಲಭ್ಯಗಳು ಇಲ್ಲದ ಕಾರಣ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು ಎಂದು ಮೃತ ಮಹಾನಂದ ಅವರ ಮಾವ ವೈಜಿನಾಥ ಆಗ್ರಹಿಸಿದ್ದಾರೆ.
ಬೇಮಳಖೇಡಾ ಆಸ್ಪತ್ರೆಗೆ ವಾಹನ ಚಾಲಕರನ್ನು ನೇಮಿಸಿ ಒಂದು ಅಂಬುಲೆನ್ಸ್ ಮತ್ತು ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿಗಾಗಿ ಅನುದಾನ ನೀಡಲಾಗುವುದು
ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ
ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ
ಹೆರಿಗೆ ಸಮಯದಲ್ಲಿ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ