ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕೆಮಿಕಲ್‌ ರಿಯಾಕ್ಟರ್‌ ಸ್ಫೋಟ, ಹತ್ತು ಕಾರ್ಮಿಕರಿಗೆ ಗಾಯ 

Last Updated 17 ಜನವರಿ 2019, 16:58 IST
ಅಕ್ಷರ ಗಾತ್ರ

ಬೀದರ್: ಕೊಳಾರ ಕೈಗಾರಿಕಾ ಪ್ರದೇಶದ ಸೃಜನ ಫಾರ್ಮಾ ಲಿಮೆಟೆಡ್‌ನಲ್ಲಿ ಗುರುವಾರ ರಾತ್ರಿ ಕೆಮಿಕಲ್‌ ರಿಯಾಕ್ಟರ್‌ ಸ್ಫೋಟಿಸಿ ಹತ್ತು ಜನ ಗಾಯಗೊಂಡಿದ್ದರು, ಒಬ್ಬನ ಸ್ಥಿತಿ ಗಂಭೀರವಾಗಿದೆ.

ಭಾಲ್ಕಿ ತಾಲ್ಲೂಕಿನ ಚಳಕಾಪುರವಾಡಿಯ ಬಂಡೆಪ್ಪ ವಿಠ್ಠಲ್, ಹಣಮಂತ ವಿಠ್ಠಲ್, ಬೀದರ್‌ ತಾಲ್ಲೂಕಿನ ಕುತ್ತಾಬಾದ್‌ನ ರಾಜಕುಮಾರ ಶರಣಪ್ಪ,ವಿಜಯಕುಮಾರ ತುಕಾರಾಮ, ಪ್ರಶಾಂತ, ಬೀದರ್‌ನ ಅರವಿಂದ, ತೆಲಂಗಾಣದ ನಾಗರಾಜ್, ಪಾಂಡುರಂಗ ರೆಡ್ಡಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ತೆಲಂಗಾಣದ ನಾಗರಾಜ್‌ ಮೋಹನ್‌ ರಾವ್‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಸಿಪಿಐ ಆನಂದರಾವ್, ಪಿಎಸ್‌ಐ ಮಡಿವಾಳಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ಬಂಧಿಸಿದರು. ನ್ಯೂಟೌನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT