ಬೀದರ್: ‘ಮುಸ್ಲಿಮರು ವೈಯಕ್ತಿಕವಾಗಿ ಬೆಳೆಯಬೇಕು. ಜೊತೆಗೆ ಸಮುದಾಯದ ಸುಧಾರಣೆಯೊಂದಿಗೆ ಇತರರನ್ನೂ ಬೆಳೆಸಲು ಪ್ರಯತ್ನಿಸಬೇಕು’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಸಲಹೆ ನೀಡಿದರು.

ಜಮಾ ಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ಹಾಗೂ ರಾಬ್ತಾ ಎ ಮಿಲ್ಲತ್ ವೇದಿಕೆಯಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಈದ್ ಸ್ನೇಹಕೂಟ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ದೇಹದಲ್ಲಿ ಹರಿಯುವ ರಕ್ತ, ಉಸಿರಾಡುವ ಗಾಳಿ ಒಂದೇ ಇರುವಾಗ, ಭೇದ ಭಾವ ಇರಬಾರದು. ಮನುಷ್ಯರೆಲ್ಲರೂ ಭೇದ ಭಾವ ಬಿಟ್ಟು ಒಂದಾಗಿ ಬಾಳಬೇಕು’ ಎಂದು ತಿಳಿಸಿದರು.

‘ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಒದಗಿಸಲಾಗಿದೆ. ಕಾಮಗಾರಿಗಳ ಉದ್ಘಾಟನೆಗೆ ಏಪ್ರಿಲ್ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೀದರ್ ಜಿಲ್ಲೆಗೆ ಬರಲಿದ್ದಾರೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಇಸ್ಹಾಕ್ ಪುತ್ತೂರ ಮಾತನಾಡಿ, ‘ಸಂತೋಷ ಹಾಗೂ ಪ್ರೀತಿ ಪರಸ್ಪರ ಹಂಚಿಕೊಳ್ಳುವುದರಿಂದ ವೃದ್ಧಿಯಾಗುತ್ತದೆ. ಸಮೃದ್ಧ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಮೌಲ್ವಿ ಮಹಮ್ಮದ್ ಫಹೀಮುದ್ದೀನ್ ಮಾತನಾಡಿ, ‘ಭೂಮಿಯಲ್ಲಿ ಮನುಷ್ಯನಿಗೆ ಮಹತ್ವದ ಸ್ಥಾನವಿದೆ. ಅದನ್ನು ತಿಳಿದು ಉತ್ತಮ ವ್ಯಕ್ತಿಯಾಗಿ ಬದುಕಬೇಕು. ಒಳಿತು ಮಾಡುತ್ತಾ, ಕೆಡುಕನ್ನು ತ್ಯಜಿಸಬೇಕು’ ಎಂದರು.

ನೌಬಾದ್ನ ಬ್ರಹ್ಮಕುಮಾರಿ ಆಶ್ರಮದ ಜ್ಯೋತಿ ಬಹೆನ್ಜಿ ಮಾತನಾಡಿ, ‘ಈ ಜಗತ್ತು ಪ್ರವಾಸಿ ತಾಣವೆಂದು ತಿಳಿದು, ನಾವೆಲ್ಲ ಪ್ರವಾಸಿಗರಂತೆ ಜೀವನ ಸಾಗಿಸಬೇಕು. ಆತ್ಮಶಾಂತಿಗಾಗಿ ದೇವರ ಸ್ಮರಣೆ ಮಾಡಬೇಕು’ ಎಂದು ಹೇಳಿದರು.

ಸೆಕ್ರೇಡ್ ಹಾರ್ಟ್ ಚರ್ಚ್ನ ಫಾದರ್ ಕ್ಲೇರಿ ಡಿಸೋಜಾ ಮಾತನಾಡಿ, ‘ಇಂದು ಅಧರ್ಮೀಯರು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ಧರ್ಮ ಅರಿತವರು ಮೌನವಾಗಿದ್ದಾರೆ. ನಾವು ಒಳಿತನ್ನು ಪ್ರೋತ್ಸಾಹಿಸುವವರು ಹಾಗೂ ಕೆಡುಕನ್ನು ವಿರೋಧಿಸುವವರಾಗಬೇಕು’ ಎಂದರು.

ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ ಮಾತನಾಡಿ, ‘ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಇಸ್ಲಾಂ ಧರ್ಮದ ಶ್ರೇಷ್ಠ ಮಾನವೀಯ ಮೌಲ್ಯಗಳಾಗಿವೆ. ಈದ್ ಸ್ನೇಹಕೂಟಗಳು ಕೋಮು ಸೌಹಾರ್ದ ಕಾಪಾಡಲು ಸಹಕಾರಿಯಾಗಿವೆ’ ಎಂದರು.

ಮೌಲಾನಾ ಮಹಮ್ಮದ್ ಮೋನಿಶ್ ಕಿರ್ಮಾನ್, ಸರ್ದಾರ್ ಗ್ಯಾನಿ ದರ್ಬಾರಾಸಿಂಗ್, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ, ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಪ್ರಮುಖರಾದ ಮಡಿವಾಳಪ್ಪ ಗಂಗಶೆಟ್ಟಿ, ಮಂಗಲಾ ಭಾಗವತ್, ಇಕ್ಬಾಲ್ ಗಾಜಿ, ತೌಹೀದ್ ಶಿಂಧೆ, ಸಂಜೀವ ಸೂರ್ಯವಂಶಿ, ಗುರುನಾಥ ಗಡ್ಡೆ, ಮಹಮ್ಮದ್ ಆಸಿಫೊದ್ದೀನ್, ಎಂ.ಎಸ್.ಮನೋಹರ ಹಾಜರಿದ್ದರು.

ಹಾಫೀಜ್ ಸೈಯದ್ ಅತೀಕುಲ್ಲಾರ ಪವಿತ್ರ ಕುರಾನ್ ಪಠಣ ಮಾಡಿದರು. ಫುರ್ಖಾನ್ ಪಾಶಾ ಪಠಣದ ಕನ್ನಡ ಅನುವಾದ ಮಾಡಿದರು. ಜಮಾ ಅತೆ ಇಸ್ಲಾಮಿ ಹಿಂದ್ ಬೀದರ್ ನಗರ ಘಟಕದ ಅಧ್ಯಕ್ಷ ಮುಹಮ್ಮದ್ ಮೌಝ್ಝಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ನಿಜಾಮುದ್ದೀನ್ ಸ್ವಾಗತಿಸಿ, ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.