ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಆಡಳಿತ ನೋಡಿ ಮತ ನೀಡುವರು; ಆಪ್ ಅಭ್ಯರ್ಥಿ

Last Updated 29 ನವೆಂಬರ್ 2021, 7:44 IST
ಅಕ್ಷರ ಗಾತ್ರ

ಹುಲಸೂರ: ದೆಹಲಿಯಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಆಮ್‌ ಆದ್ಮಿ ಪಕ್ಷ(ಆಪ್‌)ದ ಸಾಧನೆ ನೋಡಿ ಗ್ರಾಮ ಪಂಚಾಯಿತಿಯ ಸದಸ್ಯರು ಮತ ನೀಡುತ್ತಾರೆ ಎಂದು ಆಪ್‌ ಅಭ್ಯರ್ಥಿ ಗೊವೀಂದರಾವ್ ಸೋಮವಂಶಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗೆ ಜನರಿಂದ ನೇರವಾಗಿ ಆಯ್ಕೆ ಯಾದ ಸದಸ್ಯರು ಯಾವುದೇ ಪಕ್ಷದ ಚಿನ್ಹೆಯಡಿ ಸ್ಪರ್ಧಿಸಿದವರಲ್ಲ. ದೆಹಲಿಯಲ್ಲಿ ಆಪ್‌ ಸರ್ಕಾರವು ಶಿಕ್ಷಣ, ಆರೋಗ್ಯ, ಜನಸಾಮನ್ಯರ ದುಬಾರಿ ಹಣ ಖರ್ಚುಮಾಡಿ ಪ್ರಯಾಣಿಸು ವುದನ್ನು ತಪ್ಪಿಸಿದೆ. ಉಚ್ಚಿತ ವಿದ್ಯುತ್‌, ನೀರು ಸರಬರಾಜು ವ್ಯವಸ್ಥೆ ಸಹ ಮಾಡಿ ಕೊಟ್ಟಿದೆ. ಈ ಅಂಶಗಳು ಮತದಾರರ ಗಮನ ಸೆಳೆಯಲಿವೆ ಎಂದು ಹೇಳಿದರು.

ಈ ಹಿಂದೆ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯ ಸದಸ್ಯನಾಗಿ ಮಾಡಿದ ಅಭಿವೃದ್ಧಿ ಕಾರ್ಯ ಗಳು ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತಾಯಿಸಿ ನಡೆಸಿದ್ದ ಹೋರಾಟ ಗುರುತಿಸಿ ಮತ ನೀಡುವರು ಎಂದರು.

ಭಾರತ ವಿಶ್ವಗುರು ಆಗಬೇಕಾದರೆ ಭ್ರಷ್ಟಾಚಾರ, ಬಡತನ, ಅತ್ಯಾಚಾರ ದಂತಹ ಸಮಾಜ ವಿರೋಧಿ ಚಟುವಟಿಕೆ ಗಳು ಕೊನೆಗೊಳ್ಳಬೇಕು ಎಂದರು.

ಪಕ್ಷದ ಬಸವಕಲ್ಯಾಣ ನಗರ ಘಟಕ ಅಧ್ಯಕ್ಷ ಎಸ್ ಎಸ್ ಮೋಬಿನ್, ನಗರ ಘಟಕದ ಕಾರ್ಯದರ್ಶಿ ಸಚೀನ ಮೀಶ್ರಾ, ಶೇಕ್ ಅಕ್ರಮ್, ಅಹಮ್ಮದ್ ಶೇಕ್, ಧನಾಜಿ ಸೂರ್ಯವಂಶಿ, ಪಪ್ಪು ಸೂರ್ಯವಂಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT