ಮೈದುಂಬಿ ಹರಿಯುತ್ತಿರುವ ಮಾಂಜ್ರಾ ನದಿ ಔರಾದ್ ತಾಲ್ಲೂಕಿನ ಕೌಠಾ (ಬಿ) ಸೇತುವೆಯಿಂದ ಕಂಡಿದ್ದು
ಎಲ್ಲೆಲ್ಲೂ ಹಸಿರು.. ಬೀದರ್ ತಾಲ್ಲೂಕಿನ ಹೊನ್ನಿಕೇರಿಯ ಸುತ್ತಮುತ್ತಲಿನ ಪ್ರದೇಶ ಹಸಿರು ಹೊದ್ದು ನಿಂತಿರುವುದು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಕಾರಂಜಾ ಜಲಾಶಯದ ಹಿನ್ನೀರು ಪ್ರದೇಶದ ನೋಟ
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಭರಾಟೆ
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಬೀದರ್ ಜಿಲ್ಲೆಯ ಸೊಬಗು ಸೌಂದರ್ಯದ ಪ್ರಚಾರ ಕೂಡ ವ್ಯಾಪಕವಾಗಿ ನಡೆಯುತ್ತಿದೆ. ತರುಣ–ತರುಣಿಯರು ಹವ್ಯಾಸಿ ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಮೊಬೈಲ್‌ಗಳಲ್ಲಿ ಸುಂದರವಾದ ಛಾಯಾಚಿತ್ರ ವಿಡಿಯೋಗಳನ್ನು ಸೆರೆಹಿಡಿದು ತಮ್ಮದೇ ಟ್ಯಾಗ್‌ಲೈನ್ ಹ್ಯಾಷ್‌ಟ್ಯಾಗ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಗೆ ಬಗೆಯ ರೀಲ್ಸ್ ಮಾಡುತ್ತಿದ್ದಾರೆ. ಸಾವಿರಾರು ಜನ ನೋಡಿ ಪುಳಕಗೊಳ್ಳುತ್ತಿದ್ದಾರೆ. ಒಂದರ್ಥದಲ್ಲಿ ಜಿಲ್ಲೆಯ ಪ್ರಚಾರ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.