ಬೀದರ್: ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ನಗರಾಭಿವೃದ್ಧಿ ಇಲಾಖೆಯು ಶುಕ್ರವಾರ (ಫೆ.21) ಅಧಿಸೂಚನೆ ಹೊರಡಿಸಿದ್ದು, ಕಾರ್ಪೊರೇಶನ್ ರಚನೆಯ ನಿಟ್ಟಿನಲ್ಲಿ ಅಂತಿಮ ಹಂತದ ಪ್ರಕ್ರಿಯೆಗಳಿಗೆ ಚಾಲನೆ ನೀಡಿದಂತಾಗಿದೆ.

ಹಾಲಿ ಬೀದರ್ ನಗರಸಭೆ ಹಾಗೂ ನಗರದ ಸುತ್ತಮುತ್ತಲಿನ ಆರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 16 ಗ್ರಾಮಗಳನ್ನು ಮಹಾನಗರ ಪಾಲಿಕೆಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಇದರಿಂದ ಮಹಾನಗರ ಪಾಲಿಕೆಯ ವ್ಯಾಪ್ತಿ 91.96 ಚದರ ಕಿ.ಮೀಗೆ ಹಿಗ್ಗಲಿದೆ.

ಈ ಹಿಂದೆ 12 ಗ್ರಾಮಗಳನ್ನು ಸೇರ್ಪಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಕನಿಷ್ಠ ಮೂರು ಲಕ್ಷ ಜನಸಂಖ್ಯೆ ದಾಟಬೇಕೆಂಬ ನಿಯಮಕ್ಕೆ ಅದರಿಂದ ತೊಡಕಾಗಿತ್ತು. ಈಗ ಇನ್ನೂ ನಾಲ್ಕು ಗ್ರಾಮಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಒಟ್ಟಾರೆ ಜನಸಂಖ್ಯೆ 3.11 ಲಕ್ಷ ಆಗಲಿದೆ. ಇದರೊಂದಿಗೆ ಮಹಾನಗರ ಪಾಲಿಕೆಗೆ ಇರಬೇಕಾದ ಎಲ್ಲ ಅರ್ಹತೆಗಳನ್ನು ಪೂರೈಸಿದಂತಾಗಿದೆ.

ಲಿಖಿತ ರೂಪದಲ್ಲಿ ಆಕ್ಷೇಪಣೆ/ಸಲಹೆಗಳನ್ನು 30 ದಿನಗಳ ಒಳಗೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿ.ವಿ. ಗೋಪುರ, ಬೆಂಗಳೂರು ಈ ವಿಳಾಸಕ್ಕೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

2024ರ ಸೆಪ್ಟೆಂಬರ್ 17ರಂದು ಕಲಬುರಗಿಯಲ್ಲಿ ಜರುಗಿದ ವಿಶೇಷ ಸಂಪುಟ ಸಭೆಯಲ್ಲಿ ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ನಿರ್ಣಯ ಕೈಗೊಳ್ಳಲಾಗಿತ್ತು.

ಸಾಧಕ–ಬಾಧಕ:

ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಿ, ದೊಡ್ಡ ನಗರದಲ್ಲಿರಬೇಕಾದ ಎಲ್ಲ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಬೇಕೆನ್ನುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈಗ ಅದು ಈಡೇರುವ ಕಾಲ ಬಂದಿದೆ.

ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದರೆ ರಾಜ್ಯ ಸರ್ಕಾರ ಪ್ರತಿ ವರ್ಷ ಪ್ರತ್ಯೇಕವಾಗಿ ಕಾರ್ಪೊರೇಶನ್ ಮಾನದಂಡಗಳ ಪ್ರಕಾರ, ಬಜೆಟ್ ಮೀಸಲಿಡಬೇಕಾಗುತ್ತದೆ. ಇನ್ನು, ಹೊಸದಾಗಿ 16 ಗ್ರಾಮಗಳು ಮಹಾನಗರ ಪಾಲಿಕೆಗೆ ಸೇರಲಿರುವ ಕಾರಣ ಅವುಗಳಿಂದ ತೆರಿಗೆ ಕೂಡ ಹರಿದು ಬರಲಿದೆ. ಇದರಿಂದ ಸಹಜವಾಗಿಯೇ ಸಂಪನ್ಮೂಲ ಕ್ರೋಡೀಕರಣ ಹೆಚ್ಚಾಗಲಿದೆ.

ಮಹಾನಗರ ಪಾಲಿಕೆಯ ವ್ಯಾಪ್ತಿ ಹಿಗ್ಗುವುದರಿಂದ ಹೆಚ್ಚಿನ ವಾರ್ಡ್ಗಳು ಅಸ್ತಿತ್ವಕ್ಕೆ ಬರಲಿವೆ. ಸದಸ್ಯರ ಸಂಖ್ಯೆಯೂ ಸಹಜವಾಗಿಯೇ ಹೆಚ್ಚಾಗುತ್ತದೆ. ಅಲ್ಲಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕಾದ ಹೊಣೆಗಾರಿಕೆ ಕಾರ್ಪೊರೇಶನ್ ಹೆಗಲಿಗೆ ಬೀಳುತ್ತದೆ. ನಗರಕ್ಕೆ ಹೊಂದಿಕೊಂಡಿದ್ದರೂ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿದ್ದ 16 ಗ್ರಾಮಗಳಲ್ಲಿ ಹೆಚ್ಚಿನ ಸೌಕರ್ಯಗಳು ದೊರೆಯಲಿವೆ. ಆದರೆ, ಇದುವರೆಗೆ ಪಂಚಾಯಿತಿ ನಿಗದಿಪಡಿಸಿದ್ದ ತೆರಿಗೆ ತುಂಬುತ್ತ ಬಂದಿದ್ದ ಗ್ರಾಮಸ್ಥರ ಮೇಲೆ ಬರುವ ದಿನಗಳಲ್ಲಿ ಹೆಚ್ಚಿನ ಕರ ಭಾರ ಬೀಳಲಿದೆ. ಪಂಚಾಯಿತಿ ಮಟ್ಟದಿಂದ ನೇರವಾಗಿ ಕಾರ್ಪೊರೇಶನ್ ಮಟ್ಟದ ತೆರಿಗೆ ತುಂಬಬೇಕಿರುವುದರಿಂದ ಅಧಿಕ ಭಾರ ಬೀಳಲಿದೆ.

‘16 ಗ್ರಾಮಗಳು ಮಹಾನಗರ ಪಾಲಿಕೆಗೆ ಸೇರಿದ ನಂತರ ತೆರಿಗೆಯಲ್ಲಿ ಬದಲಾವಣೆ ಆಗಲಿದೆ. ಉಪ ನೋಂದಣಾಧಿಕಾರಿ ಕಚೇರಿ ಪ್ರತಿ ಸ್ಥಳಕ್ಕೂ ಮೌಲ್ಯ ನಿಗದಿಪಡಿಸುತ್ತದೆ. ಅದರ ಪ್ರಕಾರ, ತೆರಿಗೆ ನಿಗದಿ ಮಾಡಲಾಗುತ್ತದೆ’ ಎಂದು ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯಾಗಿ ಬದಲಾದ ನಂತರವೂ ಈಗಿನ ಸದಸ್ಯರ ಅವಧಿ ಪೂರ್ಣಗೊಳ್ಳುವವರೆಗೆ ಹೀಗೆಯೇ ಮುಂದುವರಿಯಲಿದೆ. ಚುನಾವಣೆ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಯಾಗಲಿರುವ 16 ಗ್ರಾಮಗಳನ್ನು ಸೇರಿಸಿಕೊಂಡು, ವಾರ್ಡ್ಗಳನ್ನು ಪುನರ್ ರಚಿಸಲಾಗುತ್ತದೆ.

ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಇದಾದ ನಂತರ ಅಂತಿಮ ಅಧಿಸೂಚನೆ ಹೊರಬೀಳಲಿದೆ.
ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ

ಬೀದರ್ ಮಹಾನಗರ ಪಾಲಿಕೆಗೆ ಸೇರಲಿರುವ 16 ಗ್ರಾಮಗಳ ತೆರಿಗೆಯಲ್ಲಿ ಬದಲಾವಣೆ ಆಗಲಿದೆ. ಅದರಂತೆ ಅವರು ತೆರಿಗೆ ತುಂಬಬೇಕಾಗುತ್ತದೆ.
ಶಿವರಾಜ ರಾಠೋಡ್ ಪೌರಾಯುಕ್ತ ಬೀದರ್ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.