ಬಸವಕಲ್ಯಾಣ: ‘ಗುರುಕೃಪೆ ಇದ್ದಲ್ಲಿ ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸಂತರ, ಶರಣರ ಸಂಗ ಮಾಡುವುದು ಅಗತ್ಯ’ ಎಂದು ಕೇಂದ್ರ ಸಚಿವೆ ಸಾದ್ವಿ ನಿರಂಜನಜ್ಯೋತಿ ಹೇಳಿದರು.

ತಾಲ್ಲೂಕಿನ ಮುಚಳಂಬದಲ್ಲಿ ಭಾನುವಾರ ನಡೆದ ನಾಗಭೂಷಣ ಶಿವಯೋಗಿಗಳ 50 ನೇ ಸ್ಮರಣೋತ್ಸವ ಹಾಗೂ ಪ್ರಣವಾನಂದ ಸ್ವಾಮೀಜಿಯ ಅವರ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಭಗವಂತನನ್ನು ಹುಡುಕುತ್ತಾ ಹರಿದ್ವಾರ, ರಾಮೇಶ್ವರಕ್ಕೆ ಹೋಗಿ ಹಣ, ಸಮಯ ವ್ಯರ್ಥ ಮಾಡದೇ ಸತ್ಸಂಗದಲ್ಲಿ ಪಾಲ್ಗೊಂಡರೆ ಇಲ್ಲೆ ಕಾಣಬಹುದು. ಮಾನಸ ಸರೋವರದಲ್ಲಿ ದೇಹದ ಮಲೀನತೆ ಕಳೆಯಬಹುದು. ಆದರೆ, ಇಂಥಲ್ಲಿ ಬಂದರೆ ಮನಸ್ಸು ಶುದ್ಧಗೊಳ್ಳುತ್ತದೆ. ಈ ಭಾಗ ಹೈದರಾಬಾದ್ ನಿಜಾಮರಿಂದ ಮುಕ್ತಿ ಹೊಂದುವಲ್ಲಿ ಸರ್ದಾರ್ ಪಟೇಲ್ ಅವರ ಪ್ರಯತ್ನ ಬಹಳಷ್ಟಿದೆ. ಇಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದರು.

ಬೀದರ್ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಇದು ಸಾಮಾಜಿಕ ಸಮಾನತೆಯ ಹರಿಕಾರ ಹಾಗೂ ಅನುಭವ ಮಂಟಪ ಸ್ಥಾಪಿಸಿದ ಬಸವಣ್ಣನವರ ನೆಲವಾಗಿದೆ. ಅವರ ತತ್ವ ಪಾಲನೆ ಅಗತ್ಯ’ ಎಂದರು.

ಮಠಾಧಿಪತಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನಾಗಭೂಷಣ ಶಿವಯೋಗಿಗಳು ಸರ್ವಸಮಾನತೆಯ ಆರೂಢ ಪರಂಪರೆ ಎತ್ತಿ ಹಿಡಿದಿದ್ದರು. ಕೈಯಲ್ಲಿ ಕಾಯಕ, ಮನದಲ್ಲಿ ಪ್ರೇಮ, ಹೃದಯದಿಂದ ದೇವರ ನಾಮಸ್ಮರಣೆ ಮಾಡಿದರೆ ಜೀವನ ಸಫಲವಾಗುತ್ತದೆ’ ಎಂದು ಹೇಳಿದರು.

ಹಿರಿಯ ಮುಖಂಡ ಶಿವರಾಜ ನರಶೆಟ್ಟಿ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಗಣೇಶಾನಂದ ಸ್ವಾಮೀಜಿ, ಕಾದರಹಳ್ಳಿ ಫಾಲಾಕ್ಷ, ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ರಮಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.

ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ ಪಾಗೋಜಿ ಹಾಗೂ ಡೀನ್ ಪ್ರೊ.ವಿ.ಗಿರೀಶಚಂದ್ರ ಅವರಿಗೆ ‘ಪ್ರಣವಶ್ರೀ ಪ್ರಶಸ್ತಿ’ ನೀಡಲಾಯಿತು.

ಶಾಸಕ ಬಿ.ನಾರಾಯಣರಾವ್, ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ, ಯಳಸಂಗಿ ಪರಮಾನಂದ ಸ್ವಾಮೀಜಿ, ತಹಶೀಲ್ದಾರ್ ಸಾವಿತ್ರಿ ಸಲಗರ, ವೈಜನಾಥ ಕಾಮಶೆಟ್ಟಿ, ಸಂಜಯ ವಾಡಿಕರ್, ಶೇಷಪ್ಪ ಗುರಣ್ಣ, ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಎಚ್.ಕಾಶಿನಾಥ, ಅಮರ ಕಾಮಶೆಟ್ಟಿ, ಶಾಂತಕುಮಾರ ಜ್ಯೋತೆಪ್ಪ ಇದ್ದರು.

ಯೋಗ ಶಿಬಿರ: ಇದಕ್ಕೂ ಮೊದಲು ಯೋಗ ಶಿಬಿರವನ್ನು ಪ್ರಣವಾನಂದ ಸ್ವಾಮೀಜಿ ಉದ್ಘಾಟಿಸಿದರು. ಉಚಿತವಾಗಿ ಯೋಗಾಸನ ಕಲಿಸಿದರೆ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು.

ತಾಲ್ಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ತ್ರಿಪುರಾಂತ, ಪರಮಾನಂದ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.