ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ ಜಿಲ್ಲೆಯಲ್ಲಿ ಗುಡುಗು, ಮಿಂಚು‌ ಸಹಿತ ಮಳೆ

Published 20 ಏಪ್ರಿಲ್ 2024, 12:18 IST
Last Updated 20 ಏಪ್ರಿಲ್ 2024, 12:18 IST
ಅಕ್ಷರ ಗಾತ್ರ

ಬೀದರ್: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಡೀ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಶನಿವಾರ ನಸುಕಿನ ಜಾವದಿಂದ ಬೆಳಗಿನ ತನಕ ವರ್ಷಧಾರೆಯಾಗಿದೆ.

ಮಳೆಯಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡಿದೆ. ಶನಿವಾರ ತಾಪಮಾನ ತಗ್ಗಿದೆ. ಆದರೆ, ದಿನವಿಡೀ ಕಾರ್ಮೋಡ ಕವಿದು, ತೀವ್ರ ಸೆಕೆಯಿದ್ದ ಕಾರಣ ಜನರು ತೀವ್ರ ಪರದಾಡಿದರು.

ಬೀದರ್ ತಾಲ್ಲೂಕಿನ ಜನವಾಡ, ಮರಕಲ್, ಅಲಿಯಂಬರ್, ಚಿಟ್ಟಾ, ಅಮಲಾಪುರ, ಗೋರನಳ್ಳಿ, ಗುನ್ನಳ್ಳಿ, ಶಹಾಪುರ, ಔರಾದ್ ತಾಲ್ಲೂಕಿನ ಚಿಂತಾಕಿ, ವಡಗಾಂವ್, ಭಾಲ್ಕಿ, ಹುಮನಾಬಾದ್, ಹುಲಸೂರ ತಾಲ್ಲೂಕಿನ ಕೆಲವೆಡೆ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT