ಬೀದರ್: ನಗರದ ನ್ಯೂ ಆದರ್ಶ ಕಾಲೊನಿಯ ಮಳಿಗೆಯೊಂದಕ್ಕೆ ಕನ್ನ ಹಾಕಿರುವ ಕಳ್ಳನೊಬ್ಬ, ಬಳಿಕ ಅದಕ್ಕೆ ಬೆಂಕಿ ಹಚ್ಚಿದ್ದರಿಂದ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಭಾನುವಾರ ನಡೆದಿದೆ.

‘ನಗರದ ಮಾತಾ ಮಾಣಿಕೇಶ್ವರಿ ಕಾಲೇಜು ಎದುರಿಗಿರುವ ಫೋಟೊ ಸ್ಟುಡಿಯೋದಲ್ಲಿ ಕಳ್ಳತನ ನಡೆದಿದೆ. ಕಳ್ಳನೊಬ್ಬ ಅಂಗಡಿಯ ಮೇಲಿನ ಶೀಟ್ ತೆಗೆದು ಒಳಗೆ ಇಳಿದು, ಕೌಂಟರ್ ನಲ್ಲಿದ್ದ ₹60 ಸಾವಿರ ನಗದು ಹಾಗೂ ಕ್ಯಾಮರಾ ಮತ್ತಿತರ ವಸ್ತುಗಳು ಸೇರಿದಂತೆ ಒಟ್ಟು ₹8.57 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾನೆ. ಆನಂತರ ಬೆಂಕಿ ಹಚ್ಚಿದ್ದರಿಂದ ಕಂಪ್ಯೂಟರ್ಸೇರಿದಂತೆ ₹6 ಲಕ್ಷ ಬೆಲೆಬಾಳುವ ವಸ್ತುಗಳು ಸುಟ್ಟು ಹೋಗಿವೆ’ ಎಂದು ಮಳಿಗೆ ಮಾಲೀಕ ಪೃಥ್ವಿರಾಜ್ ಮಡಿವಾಳ ತಿಳಿಸಿದ್ದಾರೆ.

ಬೆಂಕಿ ಸಮೀಪದ ಇತರೆ ಎರಡು ಮಳಿಗೆಗಳಿಗೂ ವ್ಯಾಪಿಸಿದ್ದರಿಂದ ಅಲ್ಲಿದ್ದ ಕೆಲ ವಸ್ತುಗಳು ಸುಟ್ಟು ಹೋಗಿವೆ. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.