ಜೆಸ್ಕಾಂನಿಂದ ಮರಗಳ ಹನನ: ಆರೋಪ ಗಡಿಗಳ ರಕ್ಷಣೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ: ಟೀಕೆ ಹಸಿರು ನಾಶಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ
ಅರಣ್ಯ ಇಲಾಖೆಯವರು ನಿಗಾ ವಹಿಸಿ ತಪ್ಪು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಒಂದು ಟೊಂಗೆ ಕಡಿಯಲು ಹತ್ತು ಸಲ ಯೋಚಿಸಬೇಕು. ಜನ ಕೂಡ ಮರ ಗಿಡಗಳನ್ನು ಕಡಿಸಬಾರದು. ಅದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು
ವಿನಯ್ ಕುಮಾರ ಮಾಳಗೆ ಸದಸ್ಯ ರಾಜ್ಯ ವನ್ಯಜೀವಿ ಮಂಡಳಿ
ಸರ್ಕಾರಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಬರುವುದಿಲ್ಲ. ಯಾರು ಮರ ಕತ್ತರಿಸಲು ಗುತ್ತಿಗೆ ಪಡೆದಿದ್ದಾರೋ ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಜೆಸ್ಕಾಂ ಹಿರಿಯ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ. ವಾಚರ್‌ಗಳಿಗೆ ತಲಾ ನಾಲ್ಕೈದು ರಸ್ತೆಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ